-ವಿಚಾರ ಬಯಲು ಮಾಡಿದ್ರೆ ಸಹೋದರಿಗೆ ತೊಂದರೆ ಬೆದರಿಕೆ
ನವದೆಹಲಿ: ಎಂಟನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ಆತನ ಸ್ನೇಹಿತರೇ ಹಲ್ಲೆ ಮಾಡಿ ಬಳಿಕ ಅವರಲ್ಲಿ ಓರ್ವ ಆತನ ಗುದದ್ವಾರಕ್ಕೆ ಮರದ ಕೋಲನ್ನು ತುರುಕಿದ ವಿಲಕ್ಷಣ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (NewDelhi) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಘಟನೆ ಮಾರ್ಚ್ 18 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
Advertisement
ನಡೆದಿದ್ದೇನು..?: 14 ವರ್ಷದ ಬಾಲಕ ಶಾಲೆಯಲ್ಲಿ (School Boy) ತನ್ನ ಸ್ನೇಹಿತರ ಜೊತೆ ವಿಚಾರವೊಂದಕ್ಕೆ ಜಗಳವಾಡಿದ್ದಾನೆ. ಈ ಗಲಾಟೆಯು ತಾರಕಕ್ಕೇರಿದ್ದು, ನಾಲ್ವರು ಸ್ನೇಹಿತರು ಬಾಲಕನನ್ನು ಮೂಲೆಗೆ ತಳ್ಳಿ ಮನಬಂದಂತೆ ಥಳಿಸಿದ್ದಾರೆ. ಅಲ್ಲದೇ ನಾಲ್ವರಲ್ಲಿ ಓರ್ವ ಮರದ ತುಂಡಿನಿಂದ ಬಾಲಕನ ಗುದದ್ವಾರಕ್ಕೆ (Anal Region) ಹಾನಿ ಮಾಡಿದ್ದಾನೆ. ಈ ಸಂಬಂಧ ವಿದ್ಯಾರ್ಥಿಯ ಪೋಷಕರು, ಪೊಲೀಸರು ಮತ್ತು ಶಾಲಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
Advertisement
ಘಟನೆಯನ್ನು ಯಾರಿಗೂ ಹೇಳದಂತೆ ವಿದ್ಯಾರ್ಥಿಗೆ ಆತನ ಗೆಳೆಯರು ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ವಿಚಾರವನ್ನು ಬಯಲು ಮಾಡಿದರೆ ಅದೇ ಶಾಲೆಯಲ್ಲಿ ಓದುತ್ತಿರುವ ತನ್ನ ಸಹೋದರಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಸಿರುವುದಾಗಿ ವಿದ್ಯಾರ್ಥಿ ಹೇಳಿದ್ದಾನೆ.
Advertisement
ದೂರಿನ ಪ್ರಕಾರ, ಮಾರ್ಚ್ 13 ರಂದು ತನ್ನ ಸಹಪಾಠಿಯೊಂದಿಗೆ ವಿದ್ಯಾರ್ಥಿ ಜಗಳವಾಡಿದ್ದಾನೆ. ಇದೇ ವಿಚಾರಕ್ಕೆ ಮಾರ್ಚ್ 18 ರಂದು ಆರೋಪಿಗಳು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ ಪ್ರತೀಕಾರದ ಭಯದಿಂದ ವಿದ್ಯಾರ್ಥಿ, ಮೊದಲು ಘಟನೆಯ ಬಗ್ಗೆ ಯಾರಿಗೂ ಹೇಳಲಿಲ್ಲ. ಇತ್ತ ಮಾರ್ಚ್ 20 ರಂದು ವಿದ್ಯಾರ್ಥಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವಿದ್ಯಾರ್ಥಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿಲ್ಲ.
ಮಾರ್ಚ್ 28 ರಂದು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಪರೇಷನ್ ಮಾಡಬೇಕು. ಯಾವುದೋ ಅಹಿತಕರ ಘಟನೆಗೆ ಮಗು ಬಲಿಯಾಗಿರಬಹುದು ಎಂದು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಆತನಿಗೆ ಆಪರೇಷನ್ ಕೂಡ ಮಾಡಲಾಗಿದೆ. ಏಪ್ರಿಲ್ 2 ರಂದು ವಿದ್ಯಾರ್ಥಿಗೆ ಪ್ರಜ್ಞೆ ಬಂದಾಗ, ಅವನು ತನ್ನ ಕುಟುಂಬಕ್ಕೆ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾನೆ. ನಂತರ ಪೊಲೀಸ್ ದೂರು ದಾಖಲಿಸಲಾಗಿದೆ.
ವಿದ್ಯಾರ್ಥಿಯ ಗುದದ್ವಾರದಲ್ಲಿ ಮರದ ಕೋಲನ್ನು ತೂರಿಸಲು ಪ್ರಯತ್ನಿಸಿದ್ದರಿಂದ ಅಲ್ಲಿ ತೀವ್ರ ಗಾಯಗಳಾಗಿವೆ ಎಂದು ವೈದ್ಯಕೀಯ ವರದಿಯು ಬಹಿರಂಗಪಡಿಸಿತು. ಅಂತೆಯೇ ವಿದ್ಯಾರ್ಥಿ ಕೂಡ ಇದನ್ನು ಒಪ್ಪಿಕೊಂಡಿದ್ದಾನೆ. ತನ್ನ ಗೆಳೆಯ ಮರದ ಕೋಲನ್ನು ತುರುಕಿಸಲು ಪ್ರಯತ್ನಿಸಿದ್ದಾನೆ ಎಂದು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಲಾಗಿದೆ ಎಂದು ತಿಳಿಸಿದ್ದು, ಇದನ್ನು ಪೊಲೀಸರು ಎಫ್‌ಐಆರ್ ನಲ್ಲಿ ದಾಖಲಿಸಿಕೊಂಡಿದ್ದಾರೆ.
ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 341 (ತಪ್ಪು ಸಂಯಮ), 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಮತ್ತು 377 (ಅಸ್ವಾಭಾವಿಕ ಅಪರಾಧಗಳು), ಜೊತೆಗೆ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಪೋಕ್ಸೊ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.