ಲಕ್ನೋ: 8 ನೇ ತರಗತಿ ವಿದ್ಯಾರ್ಥಿಯೊಬ್ಬ 6ನೇ ತರಗತಿ ವಿದ್ಯಾರ್ಥಿನಿಯ ಮನೆಗೆ ಏಕಾಏಕಿ ನುಗ್ಗಿ ಆಕೆಯ ಹಣೆಗೆ ಬಿಂದಿ (Sindoor) ಯಿಟ್ಟು ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ವಿದ್ಯಾರ್ಥಿ ಮನೆಗೆ ನುಗ್ಗಿ ಚಾಕು ತೋರಿಸುತ್ತಿದ್ದಂತೆಯೇ ವಿದ್ಯಾರ್ಥಿನಿ ಭಯದಿಂದ ಜೋರಾಗಿ ಕಿರುಚಿಕೊಂಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಜನ ಜಮಾಯಿಸುತ್ತಿದ್ದಂತೆಯೇ ಆತ ವಿದ್ಯಾರ್ಥಿನಿ ಹಣೆಗೆ ತಿಲಕವಿಟ್ಟು ಕಾಲ್ಕಿತ್ತಿದ್ದಾನೆ.
Advertisement
Advertisement
ಘಟನೆಯ ಬಳಿ ವಿದ್ಯಾರ್ಥಿನಿ ತಂದೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು 16 ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ. ಬಾಲಕ ತನ್ನ ಸ್ನೇಹಿತನ ಜೊತೆ ಬಾಲಕಿ ಮನೆಗೆ ತೆರಳಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಪತ್ನಿ ಕೋಪಿಸಿಕೊಂಡಿದ್ದಾಳೆ, ಸಮಾಧಾನ ಮಾಡ್ಬೇಕು ರಜೆ ಕೊಡಿ- ಅರ್ಜಿ ಬರೆದ ಕಾನ್ಸ್ಟೇಬಲ್
Advertisement
ಬಾಲಕಿ ಕಸ ಗುಡಿಸುತ್ತಾ ಇದ್ದಳು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ಬಾಲಕಿಯ ಕುತ್ತಿಗೆಗೆ ಚಾಕು ಇಟ್ಟು, ಹಣೆಗೆ ಕುಂಕುಮ ಇಟ್ಟಿದ್ದಾನೆ. ಬಳಿಕ ಇಬ್ಬರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇತ್ತ ಚಾಲಕನಾಗಿ ಕೆಲಸ ಮಾಡುತ್ತಿರುವ ಬಾಲಕಿಯ ತಂದೆ ಕೆಲಸ ಮುಗಿಸಿ ಮನೆಗೆ ಬಂದಾಗ ನಡೆದ ಘಟನೆಯನ್ನು ಆಕೆ ವಿವರಿಸಿದ್ದಾಳೆ.
Advertisement
ಕೂಡಲೇ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಿಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಅದರಲ್ಲಿ ಇಬ್ಬರು ಹುಡುಗರು ಸೈಕಲ್ನಲ್ಲಿ ಬಂದು ಹುಡುಗಿ ಮನೆಯಲ್ಲಿರುವುದನ್ನು ಗಮನಿಸುತ್ತಾರೆ. ನಂತರ ಮನೆಗೆ ನುಗ್ಗಿ ಬಾಲಕಿ ಹಣೆಗೆ ತಿಲಕವಿಟ್ಟು ಪರಾರಿಯಾಗುತ್ತಾರೆ.
ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದ್ದು, ಬಾಲಾಪರಾಧಿಗೃಹದಲ್ಲಿ ಇರಿಸಲಾಗಿದೆ. ಈ ಕೃತ್ಯಕ್ಕೆ ಹುಡುಗ ಪಶ್ಚಾತ್ತಾಪ ಪಡಲಿಲ್ಲ ಮತ್ತು ತಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಮತ್ತು ಮದುವೆಯಾಗಲು ಬಯಸುತ್ತೇನೆ ಎಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಮದ್ವೆಗೆ ಮುಂಚೆನೇ ಮಗು- ಬಾತ್ರೂಂ ಕಿಟಕಿಯಿಂದ ಶಿಶು ಎಸೆದ 20ರ ಯುವತಿ!
ಪೊಲೀಸರ ಪ್ರಕಾರ, ಹುಡುಗ ಕಳೆದ ಮೂರು ತಿಂಗಳಿನಿಂದ ಬಾಲಕಿಯನ್ನು ಹಿಂಬಾಲಿಸಿ ಪ್ರಪೋಸ್ ಮಾಡುವ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಈ ವಿಷಯ ತಿಳಿದ ಬಾಲಕಿಯ ಪೋಷಕರಿಗೆ ತಿಳಿದು ಆಕೆಯನ್ನು ಬೇರೆ ಶಾಲೆಗೆ ಸೇರಿಸಿದರೂ ಪೊಲೀಸರಿಗೆ ದೂರು ನೀಡಿರಲಿಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k