Monday, 22nd October 2018

Recent News

ಕಪಾಳಕ್ಕೆ ಹೊಡೆಯೋ ಆಟಕ್ಕೆ 6ನೇ ತರಗತಿ ವಿದ್ಯಾರ್ಥಿ ಬಲಿ! – ವಿಡಿಯೋ ನೋಡಿ

ಲಾಹೋರ್: ಕಪಾಳಕ್ಕೆ ಹೊಡೆಯೋ ಆಟವನ್ನು ಆಡುವ ಸಮಯದಲ್ಲಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬಿಲಾಲ್ ಮತ್ತು ಅಮಿರ್ ಶಾಲೆಯಲ್ಲಿ ಕಪಾಳಕ್ಕೆ ಹೊಡೆಯೋ ಆಟವನ್ನು ಆಡುವ ಸಂದರ್ಭದಲ್ಲಿ ಏಟಿನ ನೋವು ತಾಳಲಾರದೇ ಬಿಲಾಲ್ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಒಂದು ತಿಂಗಳು ಬಳಿಕ ಇತ್ತೀಚೆಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಏನಿದು ಘಟನೆ?
ವಿರಾಮದ ವೇಳೆಯಲ್ಲಿ ಬಿಲಾಲ್ ಮತ್ತು ಅಮಿರ್ ಸರ್ಕಾರಿ ಶಾಲೆಯ ಆಟದ ಮೈದಾನದಲ್ಲಿ ಕಪಾಳಕ್ಕೆ ಹೊಡೆಯೋ ಆಟ ಆಡಲು ಶುರು ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಇತರೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಟವನ್ನು ನೋಡಲು ಮೈದಾನಕ್ಕೆ ಬಂದಿದ್ದಾರೆ.

ಆಟ ಶುರುವಾದಂತೆ ಒಬ್ಬರನ್ನ ಇನ್ನೊಬ್ಬರು ಎಷ್ಟು ಸಾಧ್ಯವೋ ಅಷ್ಟು ಗಟ್ಟಿಯಾಗಿ ಹೊಡೆಯಲು ಆರಂಭಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅಮಿರ್ ನ ಬಲವಾದ ಏಟು ಬಿಲಾಲ್‍ನ ಕುತ್ತಿಗೆಗೆ ಬಿದ್ದು ಬಿಲಾಲ್ ಪ್ರಜ್ಞೆ ತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಅರ್ಧ ಗಂಟೆ ತಡವಾಗಿ ಬಂದ ರಕ್ಷಣಾ ತಂಡ ಬಿಲಾಲ್ ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಘಟನೆ ನಡೆದ ತಕ್ಷಣ ಬಿಲಾಲ್ ನನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಶಾಲಾ ಸಿಬ್ಬಂದಿ ವಿಫಲವಾಗಿದೆ ಹಾಗಾಗಿ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸ್ಲ್ಯಾಪ್ ಕಬಡ್ಡಿ ಅಥವಾ ಛೋಟಾ ಕಬಡ್ಡಿ ಎಂದು ಕರೆಯಲ್ಪಡುವ ಈ ಆಟವನ್ನು ಹೆಚ್ಚಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹೆಚ್ಚಾಗಿ ಆಡುತ್ತಾರೆ.

Leave a Reply

Your email address will not be published. Required fields are marked *