ಅಗರ್ತಲಾ: ಶಾಲೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ 5ನೇ ತರಗತಿ ಬಾಲಕಿ ಮೇಲೆ ಕಾಮುಕರ ಗ್ಯಾಂಗ್‌ವೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತ್ರಿಪುರಾದ ದಕ್ಷಿಣಭಾಗದ (Tripura South District) ಜಿಲ್ಲೆಯೊಂದರಲ್ಲಿ ನಡೆದಿದೆ.
ಇತ್ತೀಚಿಗಷ್ಟೇ ತ್ರಿಪುರಾದ ಉತ್ತರ ಭಾಗದ ಜಿಲ್ಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್‌ರೇಪ್ (Gang Rape) ನಡೆದ ಪ್ರಕರಣ ಬೆಳಿಕಿಗೆ ಬಂದಿತ್ತು. ಇದಾದ ಮಾರನೇ ದಿನವೇ ಘಟನೆ ನಡೆದಿದೆ.ಇದನ್ನೂ ಓದಿ: 7 ತಿಂಗಳ ಹಿಂದಷ್ಟೇ ನಾನು ಬ್ರೇಕಪ್ ಮಾಡಿಕೊಂಡೆ: ಮೃಣಾಲ್ ಠಾಕೂರ್
ಶಾಲೆಯಿಂದ ಮಗಳು ಹಿಂದಿರುಗದೇ ಇದ್ದಾಗ ಸಂತ್ರಸ್ತ ಬಾಲಕಿಯ ಪೋಷಕರು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದ್ದಾರೆ. ಎಷ್ಟೇ ಹುಡುಕಿದರೂ ಸಿಗದೇ ಇದ್ದಾಗ ತ್ರಿಪುರಾದ ಬೆಲೊನಿಯಾ ಮಹಿಳಾ ಪೊಲೀಸ್ (Belonia Women Police Station) ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೆಲೊನಿಯಾ ಠಾಣೆಯ ಓರ್ವ ಅಧಿಕಾರಿ ಮಾತನಾಡಿ, ಶಾಲೆಗೆ ಹೋದ ಮಗಳು ಮನೆಗೆ ಬರಲಿಲ್ಲ ಎಂಬ ದೂರಿನ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಿದಾಗ ಶನಿವಾರ ಸಂಜೆ ಸಂತ್ರಸ್ತ ಬಾಲಕಿಯ ಮನೆ ಹತ್ತಿರದಲ್ಲಿ ಆಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಾಲಕಿಯ ಪರಿಚಯಸ್ಥನೊಬ್ಬ ಮನೆ ಬಳಿ ಬಿಟ್ಟು ಹೋಗಿರುವುದು ನಂತರ ಗೊತ್ತಾಗಿದೆ. ತನಿಖೆ ಮಾಡಿದಾಗ ಆತ ಅದೇ ಬಡಾವಣೆಯ 22 ವರ್ಷದ ಹುಡುಗ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.
ಇಲ್ಲಿಯವರೆಗೂ ಯಾವುದೇ ಆರೋಪಿಯನ್ನು ಬಂಧಿಸಲಾಗಿಲ್ಲ ಆದರೆ ಆರೋಪಿಯ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಪೋಕ್ಸೋ ಕಾಯ್ದೆ ಹಾಗೂ ಬೇರೆ ಬೇರೆ ಸೆಕ್ಷನ್‌ಗಳಡಿಯಲ್ಲಿ ಆರೋಪಿಸಲಾಗುವುದು ಎಂದು ತಿಳಿಸಿದ್ದಾರೆ.
ಶುಕ್ರವಾರ ತ್ರಿಪುರಾದ ಉತ್ತರ ಭಾಗದ ಜಿಲ್ಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಆರೋಪ ಕೇಳಿಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿಲಾಗಿದೆ. ಸಂಜೆ ಹೊತ್ತಲ್ಲಿ ಅಂಗಡಿಗೆ ಎಂದು ಬಂದ ಬಾಲಕಿಯನ್ನು ಹತ್ತಿರದ ಕಾಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಬಾಲಕಿಯನ್ನು ಕಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು, ಪೋಷಕರಿಗೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಮುಂದಿನ 24 ಗಂಟೆಯಲ್ಲಿ ದೆಹಲಿ ಗದ್ದುಗೆಗೆ ನೂತನ ಸಾರಥಿ – ಸಿಎಂ ರೇಸ್‌ನಲ್ಲಿರುವ ಟಾಪ್ -5 ಕಲಿಗಳು ಯಾರು?
ಕಳೆದ ತಿಂಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆ ತ್ರಿಪುರಾ ದಕ್ಷಿಣ ಭಾಗದ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.