Connect with us

ಬರ್ತ್ ಡೇ ಪಾರ್ಟಿಯಲ್ಲಿ ಬಾಯ್‍ಫ್ರೆಂಡ್, ಆತನ ಸ್ನೇಹಿತರಿಂದಲೇ 12ನೇ ಕ್ಲಾಸ್ ಯುವತಿ ಮೇಲೆ ಅತ್ಯಾಚಾರ- ಮೂವರ ಬಂಧನ

ಬರ್ತ್ ಡೇ ಪಾರ್ಟಿಯಲ್ಲಿ ಬಾಯ್‍ಫ್ರೆಂಡ್, ಆತನ ಸ್ನೇಹಿತರಿಂದಲೇ 12ನೇ ಕ್ಲಾಸ್ ಯುವತಿ ಮೇಲೆ ಅತ್ಯಾಚಾರ- ಮೂವರ ಬಂಧನ

ಸೊನಾರ್‍ಪುರ್: ಹುಟ್ಟುಹಬ್ಬದ ಪಾರ್ಟಿ ವೇಳೆ 12ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಆಕೆಯ ಬಾಯ್‍ಫ್ರೆಂಡ್ ಸೇರಿದಂತೆ ನಾಲ್ವರು ಸ್ನೇಹಿತರು ಸೇರಿ ಅತ್ಯಾಚಾರವೆಸಗಿರೋ ಘಟನೆ ಪಶ್ಚಿಮ ಬಂಗಾಳದ ರತ್ನಾಲಾದಲ್ಲಿ ನಡೆದಿದೆ ಎಂದು ಬುಧವಾರದಂದು ಪೊಲೀಸರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾದ ಮೂವರನ್ನ ಬಂಧಿಸಲಾಗಿದೆ. ನಾಲ್ಕನೇ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆರೋಪಿಗಳು ಅತ್ಯಾಚಾರವೆಸಗಿದ ನಂತರ ಯುವತಿಯನ್ನ ಕೊಲ್ಲಲು ಯತ್ನಿಸಿದ್ದರು. ಸಂತ್ರಸ್ತ ಯುವತಿ ಸದ್ಯ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸಂತ್ರಸ್ತೆಯ ಬಾಯ್‍ಫ್ರೆಂಡ್ ಆತನ ಸಂಬಂಧಿಕರೊಬ್ಬರ ಮನೆಗೆ ಫೋನ್ ಮಾಡಿ ಆಕೆಯನ್ನ ಕರೆಸಿಕೊಂಡಿದ್ದ. ಮನೆಯವರು ಕಾರ್ಯಕ್ರಮವೊಂದಕ್ಕೆ ಹೋಗಿದ್ದರಿಂದ ಮನೆ ಖಾಯಿಯಾಗಿತ್ತು. ಯುವತಿಯ ಬಾಯ್‍ಫ್ರೆಂಡ್ ಮೂವರು ಸ್ನೇಹಿತರೊಂದಿಗೆ ಮದ್ಯಪಾನ ಮಾಡ್ತಿದ್ದ. ಯುವತಿಗೆ ಮತ್ತು ಬರುವ ಔಷಧ ಬೆರೆಸಿದ ಮದ್ಯವನ್ನು ಕುಡಿಯುವಂತೆ ಮಾಡಿದ್ದರು. ನಂತರ ಆಕೆಗೆ ಪ್ರಜ್ಞೆ ತಪ್ಪಿತ್ತು. ನಂತರ ಒಬ್ಬೊಬ್ಬರಾಗಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮನೆಯವರು ಮನೆಗೆ ವಾಪಸ್ ಬಂದ ನಂತರ ಯುವತಿಗೆ ರಕ್ತಸ್ರಾವವಾಗುತ್ತಿರವುದು ನೋಡಿದ್ದರು. ಬಳಿಕ ಏನೋ ಅಪಘಾತವಾಗಿದೆ ಎಂದು ಯುವತಿಯ ಪೋಷಕರಿಗೆ ಫೋನ್ ಮಾಡಿ ಹೇಳಿದ್ದರು. ಆದ್ರೆ ಯುವಕನ ಸಂಬಂಧಿಕರು ಹೇಳಿದ ಮಾತನ್ನ ಯುವತಿ ಪೋಷಕರು ನಂಬಿರಲಿಲ್ಲ. ಹೀಗಾಗಿ ಸೊನಾರ್‍ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement
Advertisement