ನವದೆಹಲಿ: 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದ 24ನೇ ಉತ್ತರ ಪರಗಣದಲ್ಲಿ ನಡೆದಿದೆ.
ದಿನದಲ್ಲಿ ಅತೀ ಹೆಚ್ಚು ಸಮಯವನ್ನು ಫೇಸ್‍ಬುಕ್ ನಲ್ಲೇ ಕಾಲ ಕಳೆಯುವುದನ್ನು ಸಹೋದರ ಪ್ರಶ್ನಿಸಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎನ್ನಲಾಗುತ್ತದೆ.
Advertisement
ಏನಿದು ಘಟನೆ?: 11 ತರಗತಿ ಓದಿತ್ತಿರೋ ವಿದ್ಯಾರ್ಥಿನಿ ದಿನದಲ್ಲಿ ಅತೀ ಹೆಚ್ಚು ಸಮಯ ಫೇಸ್ ಬುಕ್ ನಲ್ಲಿ ಕಳೆಯುತ್ತಿದ್ದಳು. ಇದನ್ನು ಆಕೆಯ ಸಹೋದರ ಪ್ರಶ್ನಿಸಿದ್ದಾನೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಆಕೆಯ ಬೆಡ್ ರೂಮ್ ನಲ್ಲೇ ತನ್ನ ಬಟ್ಟೆಯಿಂದಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.
Advertisement
ವಿದ್ಯಾರ್ಥಿನಿ ಕೈಗೆ ಮೊಬೈಲ್ ಬಂದಾಗಿನಿಂದಲೂ ಆಕೆ ಅದರಲ್ಲೇ ದಿನ ಕಳೆಯುತ್ತಿದ್ದಳು. ಸರಿಯಾಗಿ ಊಟನೂ ಸೇವಿಸುತ್ತಿರಲಿಲ್ಲ. ಓದಿನ ಕಡೆಗೂ ಗಮನ ಕೊಡುತ್ತಿರಲಿಲ್ಲ. ಇಷ್ಟು ಮಾತ್ರವಲ್ಲದೇ ಶಾಲೆಗೆ ಹೋಗಲು ಆಸಕ್ತಿಯಿರಲಿಲ್ಲ ಅಂತ ವಿದ್ಯಾರ್ಥಿನಿಯ ತಾಯಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
Advertisement
ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆಯೂ ಆಕೆಯ ಸಹೋದರ ಬೈದಿದ್ದಾನೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಅದೇ ದಿನ ಸಂಜೆ ಮನೆಯವರೆಲ್ಲಾ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ಸಂಬಂಧಿಕರನ್ನು ನೋಡಲೆಂದು ತೆರಳಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊರಗಡೆ ಹೋಗಿದ್ದ ಮನೆಯವರು ಸುಮಾರು 8 ಗಂಟೆಯ ವೇಳೆಗೆ ಮನೆಗೆ ವಾಪಾಸ್ಸಾದ ಸಂದರ್ಭದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
Advertisement
ಆಕೆ ಇಂತಹ ಕಠಿಣ ನಿರ್ಧಾರಕ್ಕೆ ಬಂದಿದ್ದಾಳೆಂದು ನನಗೆ ಅರ್ಥವಾಗುತ್ತಿಲ್ಲ. ಸಾಯುವುದಕ್ಕೂ ಒಂದು ದಿನ ಮೊದಲೇ ಆಕೆ `I Am Dead’ ಅಂತ ತನ್ನ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾಳೆ. ಅಲ್ಲದೇ ಫೇಸ್ ಬುಕ್ ನಲ್ಲೂ `ಜೀವನದಲ್ಲಿ ಎಲ್ಲಾ ಆಸೆಗಳನ್ನು ಕಳೆದುಕೊಳ್ಳುತ್ತಿದ್ದೇನೆ’ ಅಂತನೂ ಹಾಕಿಕೊಂಡಿದ್ದಳು ಅಂತ ವಿದ್ಯಾರ್ಥಿನಿಯ ಸಹೋದರಿ ಹೇಳಿದ್ದಾರೆ.
ಸದ್ಯ ಘಟನೆಯ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂಬುವುದಾಗಿ ವರದಿಯಾಗಿದೆ.