ತಿರುವನಂತಪುರಂ: ಯೂನಿಫಾರಂ ಧರಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಘಟನೆ ಕೇರಳಾದ ಕಟ್ಟಪ್ಪನದಲ್ಲಿ ನಡೆದಿದೆ.
ಅಭಿನ್ ಸುರೇಶ್(19) ಶಿಕ್ಷಕನ ಮೇಲೆ ಹಲ್ಲೆ ಮಾಡಿ ಅರೆಸ್ಟ್ ಆದ ವಿದ್ಯಾರ್ಥಿ. ಮಂಗಳವಾರ ಅಭಿನ್ ಹಾಲ್ ಟಿಕೆಟ್ ಪಡೆಯಲು ಯೂನಿಫಾರಂ ಧರಿಸದೇ ಶಾಲೆಗೆ ಹೋಗಿದ್ದನು. ಅಲ್ಲದೇ ಶಿಕ್ಷಕನ ಅನುಮತಿ ಪಡೆಯದೇ ಕ್ಲಾಸ್‍ರೂಂ ಒಳಗೆ ಹೋಗಿದ್ದನು.
Advertisement
ಈ ವೇಳೆ ಅಭಿನ್‍ನ ಭೂಗೋಳ ಶಿಕ್ಷಕ ಎಸ್. ಜಯದೇವ್ ಯೂನಿಫಾರಂ ಏಕೆ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಶಿಸ್ತಿನಿಂದ ನಡೆದುಕೋ ಎಂದು ಎಚ್ಚರಿಸಿದ್ದಾರೆ. ಇದರಿಂದ ಕೋಪಗೊಂಡ ಅಭಿನ್ ತನ್ನ ಶಿಕ್ಷಕ ಜಯದೇವ್‍ಗೆ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾನೆ. ಪರಿಣಾಮ ಶಿಕ್ಷಕನ ಕೆನ್ನೆ ಹಾಗೂ ಕಿವಿಗೆ ಗಾಯಗಳಾಗಿದೆ.
Advertisement
Advertisement
ಅಭಿನ್ ತನ್ನ ಕಬ್ಬಿಣದ ಕಡುಗದಿಂದ ನನ್ನ ಹೊಟ್ಟೆಗೆ ಪಂಚ್ ಮಾಡಿದ್ದಾನೆ ಎಂದು ಶಿಕ್ಷಕ ಜಯದೇವ್ ಆರೋಪಿಸಿದ್ದಾರೆ. ಸದ್ಯ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಜಯದೇವ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಜಯದೇವ್ ಕಿರುಚಾಟ ಕೇಳುತ್ತಿದ್ದಂತೆ ಅಕ್ಕಪಕ್ಕದ ಕ್ಲಾಸ್‍ರೂಮಿನಲ್ಲಿದ್ದ ಬೇರೆ ಶಿಕ್ಷಕರು ಘಟನಾ ಸ್ಥಳಕ್ಕೆ ಓಡಿ ಬಂದಿದ್ದಾರೆ. ಅಭಿನ್ ವಿರುದ್ಧ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಭಿನ್‍ನನ್ನು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv