ಗಾಂಧೀನಗರ: ಅನುಮತಿಯನ್ನು ಪಡೆಯದೇ ಮೂತ್ರ, ವಿಸರ್ಜನೆಗೆ ಹೋಗಿದ್ದ 10ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಗುಜರಾತ್ನ ರಾಜ್ಕೋಟ್ನಲ್ಲಿ ನಡೆದಿದೆ.
ಹಲ್ಲೆಗೊಳಗಾದ ಹುಡುಗ ನೀಲಾಶ್ ಉನದ್ಕತ್ ಆಗಿದ್ದು, ಕಳೆದ ಗುರುವಾರ ಸಂಜೆ ನಡೆದಿದೆ. ಮಾರ್ಚ್28 ರಿಂದ 10ನೇ ತರಗತಿ ಪರೀಕ್ಷೆ ಪ್ರಾರಂಭವಾಗುತ್ತಿದ್ದರಿಂದ ವಿದ್ಯಾರ್ಥಿ 2 ತಿಂಗಳ ಹಿಂದೆ ಟ್ಯೂಷನ್ಗೆ ಸೇರಿದ್ದನು. ಇದನ್ನೂ ಓದಿ: 32 ವರ್ಷಗಳ ನಂತ್ರ ಕಾಶ್ಮೀರಿ ಪಂಡಿತರಿಗೆ ಸಿಕ್ಕಿದ್ದು ಸಿನಿಮಾ, ನ್ಯಾಯವಲ್ಲ: ಕೇಜ್ರಿವಾಲ್
Advertisement
Advertisement
ಗುರುವಾರ ಟೆಸ್ಟ್ ಬರೆಯಲು ಟ್ಯೂಷನ್ಗೆ ಹೋಗಿದ್ದ ಹುಡುಗ ಶಿಕ್ಷಕರ ಅನುಮತಿಯಿಲ್ಲದೆ ಮೂತ್ರ, ವಿಸರ್ಜನೆಗೆ ಹೋಗಿದ್ದನು. ಇದರಿಂದ ಕೋಪಗೊಂಡ ಶಿಕ್ಷಕ ಸ್ಟಂಪ್ಸ್ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಹಿಜಬ್ಗಾಗಿ ಪರೀಕ್ಷೆ ಕೈ ಬಿಟ್ಟ ವಿದ್ಯಾರ್ಥಿನಿ
Advertisement
ಈ ವಿಚಾರವನ್ನು ವಿದ್ಯಾರ್ಥಿ ತನ್ನ ತಂದೆಗೆ ತಿಳಿಸಿದ್ದು, ನಂತರ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಈ ಸಂಬಂಧ ಪೊಲೀಸರು ವಿದ್ಯಾರ್ಥಿಯ ಹೇಳಿಕೆ ಪಡೆದು ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.