ಚಂಡೀಗಡ: ಸರ್ಕಾರಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಹರಿಯಾಣದ ಸಿರ್ಸಾದಲ್ಲಿ ನಡೆದಿದೆ.
ಸಿರ್ಸಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಸಂಪರ್ಕಿಸಿದಾಗ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ತಿಳಿದಿದೆ. ನಂತರ ಸಂತ್ರಸ್ತೆಯ ತಾಯಿ ದೂರು ನೀಡಿದ್ದು, ಸಿರ್ಸಾ ಸದರ್ ಪೊಲೀಸರು ಅನಾಮಿಕ ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
Advertisement
ಸಂತ್ರಸ್ತ ವಿದ್ಯಾರ್ಥಿನಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಅವಳು ಆರೋಪಿಯ ಹೆಸರು ನನಗೆ ತಿಳಿದಿಲ್ಲ. ಅವನ ಮುಖ ನೋಡಿ ಪತ್ತೆಹಚ್ಚಬಲ್ಲೆ ಎಂದು ತಿಳಿಸಿದ್ದಾಳೆ. ಹೀಗಾಗಿ ಆರೋಪಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
Advertisement
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಿರ್ಸಾ ಪೊಲೀಸ್ ಉಪ ವರಿಷ್ಠಾಧಿಕಾರಿ(ಡಿಎಸ್‍ಪಿ)ರಾಜೇಶ್ ಕುಮಾರ್, ಹತ್ತಿರದ ಹಳ್ಳಿಯ ನಿವಾಸಿ ಸಂತ್ರಸ್ತೆಯ ತಾಯಿಯಿಂದ ಪೊಲೀಸರಿಗೆ ದೂರು ಬಂದಿದೆ. ತನ್ನ ಮಗಳು 1ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಊಟದ ಸಮಯದಲ್ಲಿ ಆಕೆಯ ಸಹಪಾಠಿ ಶಾಲೆಯಲ್ಲಿ ಅತ್ಯಾಚಾರ ಯತ್ನ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
Advertisement
ಘಟನೆ ನಂತರ ವಿದ್ಯಾರ್ಥಿನಿ ಹೊಟ್ಟೆನೋವೆಂದು ಅಳುತ್ತ ಮನೆಗೆ ಬಂದಿದ್ದಾಳೆ. ಆಗ ತಕ್ಷಣವೇ ಆಕೆಯ ತಾಯಿ ಹತ್ತಿರದ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಅವರು, ಸಿರ್ಸಾದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ನಂತರ ಸಿರ್ಸಾ ಆಸ್ಪತ್ರೆಗೆ ವಿದ್ಯಾರ್ಥಿನಿಯನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಡಿಎಸ್‍ಪಿ ರಾಜೇಶ್ ಕುಮಾರ್ ಮಾಹಿತಿ ನೀಡಿ, ಆರೋಪಿಯ ಹೆಸರು ನನಗೆ ತಿಳಿದಿಲ್ಲ. ಆದರೆ, ಮುಖ ನೋಡಿ ಆತನನ್ನು ಗುರುತಿಸಬಲ್ಲೆ ಎಂದು ಸಂತ್ರಸ್ತ ವಿದ್ಯಾರ್ಥಿನಿ ಪೊಲೀಸರಿಗೆ ತಿಳಿಸಿದ್ದಾಳೆ. ಇದೀಗ ಸಂತ್ರಸ್ತೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನು ಪತ್ತೆ ಹಚ್ಚಲು ಆಕೆಯನ್ನು ಶೀಘ್ರವೇ ಶಾಲೆಗೆ ಕರೆದೊಯ್ಯಲಾಗುವುದು. ಆರೋಪಿ ಪತ್ತೆಯಾದರೂ ಸಹ ಬಾಲಕ 7 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದರೆ ಕಾನೂನಿನಡಿ ಶಿಕ್ಷೆಗೆ ಅವಕಾಶವಿಲ್ಲ ಎಂದು ವಿವರಿಸಿದ್ದಾರೆ.