ಬೆಳಗಾವಿ: ವಾಲ್ಮೀಕಿ ಭವನ (Valmiki Bhavana) ನಿರ್ಮಾಣ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಘರ್ಷಣೆ (Clash) ನಡೆದು ಕಲ್ಲು ತೂರಾಟ (Stone Pelting) ನಡೆದ ಘಟನೆ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ ನಡೆದಿದೆ.
ವಾಲ್ಮೀಕಿ ಭವನ ನಿರ್ಮಾಣದ ಸರ್ವೆಗೆ ಸದಾಶಿವ ಭಜಂತ್ರಿ ಕುಟುಂಬ ವಿರೋಧ ವ್ಯಕ್ತಪಡಿಸಿದ್ದಕ್ಕೆ ರೊಚ್ಚಿಗೆದ್ದ ಜನರು ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಸಂಕ್ರಾಂತಿ ಹಿನ್ನೆಲೆ ಸಿಹಿ ತಿಂಡಿ ಅಡುಗೆ ಮಾಡುತ್ತಿದ್ದ ಕುಟುಂಬದ ಮೇಲೆ ಏಕಾಏಕಿ ನೂರಾರು ಜನರಿಂದ ದಾಳಿ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: 15 ರೂಪಾಯಿಗೆ ಸಿಕ್ತಾರೆ ಗರ್ಲ್ ಫ್ರೆಂಡ್ – ಆ್ಯಪ್‌ನಲ್ಲಿ ಮಹಿಳೆಯರ ಮಾನಹಾನಿ; ಕೊಡಗಿನ ವಿವಿಧ ಠಾಣೆಗಳಲ್ಲಿ ಕೇಸ್!
ದಾಳಿಗೆ ಹೆದರಿ ಬಾಗಿಲು ಹಾಕಿಕೊಂಡು ಸದಾಶಿವ ಕುಟುಂಬ ಪ್ರಾಣ ಉಳಿಸಿಕೊಂಡಿದೆ. ಮನೆ ಬಾಗಿಲು ಹಾಕಿದರೂ ಒಳಗಡೆ ನುಗ್ಗಿ ಹಲ್ಲೆಗೆ ಯತ್ನಸಿದ್ದಾರೆ. ಮಹಿಳೆಯರು ಕೈಯಲ್ಲಿ ಕಲ್ಲುಗಳು ಎಸೆಯುವ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ. ಕಲ್ಲೆಸೆದು ಶೌಚಾಲಯ, ಮನೆ ಮಾಳಿಗೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.
ಘಟನೆಯಲ್ಲಿ ವೃದ್ಧೆಯೊಬ್ಬರು ಗಾಯಗೊಂಡಿದ್ದು ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಎಸ್‌ಪಿ ಕೆ.ರಾಮರಾಜನ್ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಗ್ರಾಮದಲ್ಲಿ ಬೀಡುಬಿಟ್ಟಿದ್ದು ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

