ಚಿತ್ರದುರ್ಗ: ಜಮೀನು ವಿಚಾರಕ್ಕೆ ಎರಡು ಗುಂಪಿನ ಮಧ್ಯೆ ಮಾರಾಮಾರಿಯಾಗಿದ್ದು, ಪೊಲೀಸರ ಎದುರಲ್ಲಿಯೇ ಅಟ್ಟಾಡಿಸಿಕೊಂಡು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
Advertisement
ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದುಗ್ಗಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಒಂದೇ ಕುಟುಂಬದಲ್ಲಿ ಹುಟ್ಟಿ ಸೋದರ ಸಂಬಂಧಿಗಳಾಗಿರುವ ಚಿತ್ತಣ್ಣ ಹಾಗೂ ಕುಂಟಪ್ಪನ ನಡುವೆ ಜಮೀನಿನ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ಸರ್ವೆ ಮಾಡಿಸಿ, ಇಬ್ಬರು ಮಕ್ಕಳಿಗೂ ಸಮವಾಗಿ ಹಂಚುವಂತೆ ತಿಳಿಸಿದ್ದರು. ಆದರೆ ಗಲಾಟೆಯಿಂದಾಗಿ ಜಮೀನಿನಲ್ಲಿ ಉಳುಮೆ ಮಾಡಲು ತೆರಳಿರುವ ಚಿತ್ತಣ್ಣ ಹಾಗೂ ಬೆಂಬಲಿಗರಾದ ಬಸವರಾಜ್, ಬೆಲ್ಲಣ್ಣ, ಜಯ್ಯಣ್ಣ ಮತ್ತು ರೇವಣ್ಣ ಅವರನ್ನು ಜಮೀನು ಸರ್ವೆಯಾಗಿ, ಇಬ್ಭಾಗವಾಗುವವರೆಗೆ ಉಳುಮೆಮಾಡದಂತೆ ತಡೆದ ಪರಿಣಾಮ ಗಲಭೆ ಶುರುವಾಗಿದೆ.
Advertisement
Advertisement
ಉಳುಮೆ ಮಾಡದಂತೆ ತಡೆದ ಕವಿತ, ಚಿತ್ರಲಿಂಗಪ್ಪ, ಕುಂಟಪ್ಪನ ಮೇಲೆ ಚಿತ್ತಣ್ಣ ಮತ್ತು ಅವರ ಬೆಂಬಲಿಗರು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಹಿರಿಯೂರು ಸಿಪಿಐ ರಾಘವೇಂದ್ರ ಜಗಳ ಬಿಡಿಸಲು ಹರಸಾಹಸ ಪಟ್ಟರು ಕೂಡ ಭಾರೀ ಫೈಟಿಂಗ್ ನಡೆದು ನಾಲ್ವರು ಗಂಭೀರವಾಗಿ ಗಾಯಗೊಂಡು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭಿಸಿದ ರೈತ
Advertisement
ಈ ಜಮೀನಿನ ಇಬ್ಭಾಗ ವಿಚಾರ ನ್ಯಾಯಾಲಯದಲ್ಲಿದ್ದರು ಸಹ ರಾಜಕೀಯ ಪ್ರಭಾವ ಹಾಗೂ ಸ್ಥಳೀಯ ಪೊಲೀಸರ ಕುಮ್ಮಕ್ಕು ಪಡೆದ ಚಿತ್ತಣ್ಣ ಹಾಗು ಆತನ ಬೆಂಬಲಿಗರು, ಮಹಿಳೆಯರು ಹಾಗೂ ವೃದ್ಧರೆನ್ನದೇ ಮನಸೋ ಇಚ್ಛೆ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಕೂಡ ಈ ಹಲ್ಲೆಗೆ ಸಾಥ್ ನೀಡಿದ್ದಾರೆಂದು ಆರೋಪಿಸಿದ್ದು, ಮಾರಾಕಾಸ್ತ್ರಗಳಿಂದ ಬಡಿದಾಡುವ ಗಲಾಟೆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ಪ್ರಕರಣ ಜವನಗೊಂಡನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಉಗುರಲ್ಲಿ ಹೋಗುವ ವಿಚಾರಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ ಕೋರ್ಟ್ ತೀರ್ಪು ಬರುವ ಮುನ್ನವೇ ಜಮೀನಿನಲ್ಲಿ ಮಾರಾಮಾರಿ ನಡೆಸಿ ಆಸ್ಪತ್ರೆ ಸೇರಿರುವುದು ವಿಪರ್ಯಾಸ. ಇದನ್ನೂ ಓದಿ: ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ