ಕಾರು ಪಾರ್ಕಿಂಗ್ ವಿಚಾರವಾಗಿ ಐಪಿಎಸ್ ಅಧಿಕಾರಿ ಜೊತೆ ಕಿರಿಕ್ ಮಾಡಿಕೊಂಡಿದ್ದ ಡಿಂಪಲ್ ಹಯಾತಿ, ಈ ವಿಷಯವನ್ನು ಇಲ್ಲಿಗೆ ಬಿಡುವಂತೆ ಕಾಣುತ್ತಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಐಪಿಎಸ್ ಅಧಿಕಾರಿಯನ್ನು ಸದಾ ಕೆಣುಕುತ್ತಲೇ ಇದ್ದಾರೆ. ಐಪಿಎಸ್ ಅಧಿಕಾರಿಯನ್ನು ಉರಿಸಲೆಂದೇ ಅವರು ಬಾಲಯ್ಯ (Balayya) ನಟನ ಸಿಂಹ ಚಿತ್ರದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅನ್ಯಾಯವಾದಾಗೆಲ್ಲ ‘ನೋ ಪೊಲೀಸ್’ ಎನ್ನುವ ಡೈಲಾಗ್ ಇದೆ.
Advertisement
ತಮಗೆ ಅನ್ಯಾಯವಾಗಿದೆ. ಹಾಗಾಗಿ ನೋ ಪೊಲೀಸ್ ಎನ್ನುವ ಅರ್ಥದಲ್ಲಿ ಅದನ್ನು ಕಲ್ಪಿಸಿಕೊಳ್ಳಲಾಗುತ್ತಿದೆ. ಒಂದು ಕಡೆ ಪೊಲೀಸ್ ಅಧಿಕಾರಿ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಇಳಿಯುತ್ತಿದ್ದರೆ ಮತ್ತೊಂದು ಕಡೆ ಡಿಂಪಲ್ ಹಯಾತಿ (Dimple Hayati) ಖಿನ್ನತೆಗೆ ಜಾರಿದ್ದಾರಂತೆ. ಅಧಿಕಾರಿ ಜೊತೆಗಿನ ಜಗಳದಿಂದಾಗಿ ನಟಿಗೆ ಬೆದರಿಕೆಯ ಕರೆಗಳು ಬರುತ್ತಿದ್ದು, ಅವುಗಳನ್ನು ಎದುರಿಸೋಕೆ ಆಗದೇ ಡಿಂಪಲ್ ಖಿನ್ನತೆಗೆ (Depression) ಒಳಗಾಗಿದ್ದಾರೆ ಎಂದು ಮಾಧ್ಯಮಗಳ ವರದಿ ಮಾಡಿವೆ.
Advertisement
Advertisement
???? pic.twitter.com/4ARgdsmEur
— Dimple Hayathi (@DimpleHayathi) May 27, 2023
Advertisement
ಸಿನಿಮಾಗಳಿಗಿಂತ ಕಿರಿಕ್ ಸುದ್ದಿಗಳಿಂದಲೇ ಹೆಚ್ಚೆಚ್ಚು ಸುದ್ದಿ ಮಾಡಿದವರು ಡಿಂಪತ್ ಹಯಾತಿ. ಈ ಹಿಂದೆಯೂ ನಾನಾ ರೀತಿಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರು. ಮೊನ್ನೆಯಷ್ಟೇ ಐಪಿಎಸ್ ಅಧಿಕಾರಿ ಜೊತೆ ಡಿಂ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಪೊಲೀಸ್ ಅಧಿಕಾರಿ ರಾಹುಲ್ ಹೆಗ್ಡೆ(Rahul Hegde)- ಸೌತ್ ನಟಿ ಡಿಂಪಲ್ ಹಯಾತಿ ನಡುವಿನ ಜಗಳ ತಾರಕಕ್ಕೇರಿದೆ. ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಕಿತ್ತಾಟ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪೊಲೀಸ್ ಅಧಿಕಾರಿಯ ಕಾರನ್ನು ಡ್ಯಾಮೇಜ್ ಮಾಡಿದ ಆರೋಪದ ಮೇಲೆ ನಟಿ ಡಿಂಪಲ್ ಹಯಾತಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ನಟಿ ಡಿಂಪಲ್ ಹಾಗೂ ಅವರ ಗೆಳೆಯ ವಿಕ್ಟರ್ (Victor) ಹೈದರಾಬಾದ್ನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದಾರೆ. ಇದೇ ಅಪಾರ್ಟ್ಮೆಂಟ್ನಲ್ಲಿ ಹೈದರಾಬಾದ್ನ ಟ್ರಾಫಿಕ್ ಪೊಲೀಸ್ ಡೆಪ್ಯೂಟಿ ಕಮೀಷನರ್, ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಕೂಡ ವಾಸವಾಗಿದ್ದಾರೆ. ಇವರ ಮಧ್ಯೆ ಕೆಲ ಸಮಯದಿಂದ ಪಾರ್ಕಿಂಗ್ ವಿಚಾರದಲ್ಲಿ ಕಿತ್ತಾಟ ನಡೆದಿದೆ. ನಟಿ ಈ ವಿಚಾರದಲ್ಲಿ ರಿವೇಂಜ್ ತೆಗೆದುಕೊಂಡಿದ್ದಾರೆ.
ಮೇ ೧೪ರಂದು ಡಿಂಪಲ್ ಹಯಾತಿ ಅವರು ರಾಹುಲ್ ಕಾರಿಗೆ ಡ್ಯಾಮೇಜ್ ಮಾಡಿದ್ದಾರೆ. ಇದು ಉದ್ದೇಶಪೂರ್ವಕವಾಗಿತ್ತು ಎಂಬುದಕ್ಕೆ ಸಿಸಿಟಿವಿ ದೃಶ್ಯಗಳು ಸಾಕ್ಷ್ಯ ಸಿಕ್ಕಿದೆ. ಇದನ್ನು ಆಧರಿಸಿ ನಟಿ ಡಿಂಪಲ್ ವಿರುದ್ಧ ರಾಹುಲ್ ಅವರ ಕಾರು ಡ್ರೈವರ್ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಡಿಂಪಲ್ ಹಯಾತಿಗೆ ಸಮನ್ಸ್ ನೀಡಲಾಗಿದೆ.