ನವದೆಹಲಿ: ಹರಿಯಾಣ, ಮಹಾರಾಷ್ಟ್ರ ಚುನಾವಣೆಯಲ್ಲಿ ಸೋಲಿನ ಬಳಿಕ ಇಂಡಿಯಾ (INDIA) ಒಕ್ಕೂಟದಲ್ಲಿ ಬಿರುಕು ಮೂಡಿದೆ. ಇಂಡಿಯಾ ಒಕ್ಕೂಟದ ನಾಯಕತ್ವ ಬದಲಾಗಬೇಕು ಎಂದು ಸಮಾಜವಾದಿ ಪಕ್ಷ ಆಗ್ರಹಿಸಿದರೆ, ಕಾಂಗ್ರೆಸ್ (Congress) ಇದನ್ನು ವಿರೋಧಿಸಿದೆ. ಇತ್ತ ಒಕ್ಕೂಟದ ಶಿಲ್ಪಿ ನಾವು ಎಂದು ಆರ್‌ಜೆಡಿ (RJD) ಪ್ರತಿಪಾದಿಸಿದೆ.
ಸಮಾಜವಾದಿ ಪಕ್ಷ ಮತ್ತು ಸಿಪಿಐ ಮೈತ್ರಿಕೂಟದಲ್ಲಿ ತಮ್ಮ ಪಾತ್ರ ಹೆಚ್ಚಿಸುವ ಹೇಳಿಕೆ ನೀಡಿದ ಬೆನ್ನಲ್ಲೇ ಈ ಹೇಳಿಕೆಗಳು ಬಂದಿವೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಉದಯವೀರ್ ಸಿಂಗ್, ಇಂಡಿಯಾ ಬಣವು ಬ್ಯಾನರ್ಜಿಯವರ ಸಲಹೆಯನ್ನು ಚರ್ಚಿಸಬೇಕು ಮತ್ತು ಟಿಎಂಸಿ ವರಿಷ್ಠರಿಗೆ 100% ಬೆಂಬಲ ಮತ್ತು ಸಹಕಾರ ವಿಸ್ತರಿಸಬೇಕು ಎಂದು ಹೇಳಿದ್ದರು.ಇದನ್ನೂ ಓದಿ: ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಮಿತ್ ಶಾ ವಿಫಲವಾಗಿದ್ದಾರೆ: ಕೇಜ್ರಿವಾಲ್ ಆರೋಪ
Advertisement
Advertisement
ಮಮತಾ ಬ್ಯಾನರ್ಜಿ ಅವರಿಗೆ ಒಕ್ಕೂಟ ಮುನ್ನಡೆಸುವ ಆಸೆ ವ್ಯಕ್ತಪಡಿಸಿದ್ದರೆ, ಮೈತ್ರಿಕೂಟದ ನಾಯಕರು ಅದನ್ನು ಪರಿಗಣಿಸಿ ಅವರಿಗೆ ಬೆಂಬಲ ನೀಡಬೇಕು. ಇದು ಮೈತ್ರಿಯನ್ನು ಬಲಪಡಿಸುತ್ತದೆ. ಬಂಗಾಳದಲ್ಲಿ ಬಿಜೆಪಿಯನ್ನು ನಿಲ್ಲಿಸುವಲ್ಲಿ ಮಮತಾ ಬ್ಯಾನರ್ಜಿ ಮುಂದಾಳತ್ವ ವಹಿಸಿದರು. ಅವರ ಬಗ್ಗೆ ನಮಗೆ ಗೌರವ ಇದೆ ಎಂದು ಉದಯವೀರ್ ಸಿಂಗ್ ಹೇಳಿದ್ದಾರೆ.
Advertisement
ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಗಳಲ್ಲಿ ತನ್ನ ಮಿತ್ರಪಕ್ಷಗಳಿಗೆ ಅವಕಾಶ ನೀಡದ ಕಾಂಗ್ರೆಸ್‌ನ ವಿರುದ್ಧ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅಸಮಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಮೈತ್ರಿಕೂಟದ ಪಾಲುದಾರರಿಗೆ ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಇಂಡಿಯಾ ಬ್ಲಾಕ್ ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶಗಳು ವಿಭಿನ್ನವಾಗಿರುತ್ತಿದ್ದವು ಎಂದು ಹೇಳಿದರು.
Advertisement
ಲಾಲು ಪ್ರಸಾದ್ ಯಾದವ್ ಅವರ ಉಪಕ್ರಮದ ಮೇರೆಗೆ ಪ್ರತಿಪಕ್ಷಗಳ ಮೈತ್ರಿಕೂಟದ ಮೊದಲ ಸಭೆ ಪಾಟ್ನಾದಲ್ಲಿ ನಡೆಯಿತು ಎಂದು ಆರ್‌ಜೆಡಿಯ ಮೃತ್ಯುಂಜಯ ತಿವಾರಿ ಪ್ರತಿಪಾದಿಸಿದರು. ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮೈತ್ರಿಯ ನಿಜವಾದ ಶಿಲ್ಪಿ ಲಾಲು ಪ್ರಸಾದ್ ಯಾದವ್. ಎಲ್ಲರೂ ತಮ್ಮ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ತೊಡಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಪ್ರಬಲವಾಗಿ ಹೋರಾಡುತ್ತಿದ್ದಾರೆ. 2025ರಲ್ಲಿ ಬಿಹಾರದ ಸರದಿ ಎಂದರು.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೂ ಇಂಡಿಯಾ ಒಕ್ಕೂಟದಲ್ಲಿನ ಬಿರುಕು ಗೋಚರಿಸಿತು. ಗೌತಮ್ ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಿಂದ ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳು ದೂರವಿದ್ದವು. ಹೀಗಾಗೀ ಒಕ್ಕೂಟದಲ್ಲಿ ನಾಯಕತ್ವಕ್ಕಾಗಿ ಹೋರಾಟ ಶುರುವಾಗಿದೆ.ಇದನ್ನೂ ಓದಿ: Namma Metro | ಒಂದೇ ದಿನ ದಾಖಲೆಯ 9.20 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚಾರ