ಬಿಗ್ ಬಾಸ್ ಕನ್ನಡ 11ಕ್ಕೆ ಅದ್ಧೂರಿ ಚಾಲನೆ ನೀಡಿದ ಮರುದಿನವೇ ದೊಡ್ಮನೆಯಲ್ಲಿ ರಂಪಾಟ ಶುರುವಾಗಿದೆ. ಆಟದ ಮೊದಲ ದಿನವೇ ಚೈತ್ರಾ ಕುಂದಾಪುರ ರೂಲ್ಸ್ ಬ್ರೇಕ್ ಮಾಡಿರೋದು ಮನೆಮಂದಿಯ ಕೋಪ ತರಿಸಿದೆ. ಹಣ್ಣನ್ನು ಕಚ್ಚಿ ನರಕದ ಮನೆಯೊಳಗೆ ಚೈತ್ರಾ ಎಸೆದಿರೋದು ಮನೆಯಲ್ಲಿನ ಕಲಹಕ್ಕೆ ಕಾರಣವಾಗಿದೆ. ಉಗ್ರಂ ಮಂಜು (Ugramm Manju) ಮತ್ತು ಚೈತ್ರಾ (Chaithra Kundapura) ನಡುವೆ ಜಟಾಪಟಿ ನಡೆದಿದೆ. ಇದನ್ನೂ ಓದಿ:ದರ್ಶನ್ ನೋಡಲು ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ
ಬಿಗ್ ಬಾಸ್ ಸೀಸನ್ 11ರಲ್ಲಿ (Bigg Boss Kannada) ಸ್ವರ್ಗ, ನರಕದ ಯುದ್ಧ ಶುರುವಾಗಿದೆ. ಇಂದಿನ ಟಾಸ್ಕ್‌ನಲ್ಲಿ ನರಕದ ನಿವಾಸಿಗಳಿಗೆ ಸ್ವರ್ಗದಲ್ಲಿರುವ ಸ್ಪರ್ಧಿಗಳು ಶಿಕ್ಷೆಗೆ ಗುರಿಪಡಿಸಿದ್ದಾರೆ. ಸ್ವರ್ಗದವರು ತೆಗೆದುಕೊಂಡ ತೀರ್ಮಾನದಂತೆ ಮನೆ ಕೆಲಸದ ಜವಾಬ್ದಾರಿಯನ್ನು ನರಕ ನಿವಾಸಿಗಳ ಮಾಡಬೇಕು.
ನರಕದಲ್ಲಿರುವ ಏಳು ಸ್ಪರ್ಧಿಗಳು ಬಿಗ್ ಬಾಸ್ ಮನೆಯ ಕೆಲಸ ಮಾಡಲು ಆರಂಭಿಸಿದ್ದಾರೆ. ಅಂದರೆ ಮನೆಯನ್ನ ತೊಳೆಯೋದು, ಗುಡಿಸೋದು ಹೀಗೆ ಎಲ್ಲಾ ಕೆಲಸವನ್ನು ಮಾಡುತ್ತಾ ಇದ್ದಾರೆ. ಆಟ ಮೊದಲ ದಿನವೇ ಸ್ವರ್ಗ, ನರಕದ ಅಸಲಿ ಕಿಚ್ಚು ಹೊತ್ತಿಕೊಂಡಿದೆ. ಸ್ವರ್ಗದಲ್ಲಿರುವ ಉಗ್ರಂ ಮಂಜು ಅವರು ನರಕದ ನಿವಾಸಿ ಚೈತ್ರಾ ಕುಂದಾಪುರಗೆ ಕೆಲಸ ಒಂದನ್ನ ಹೇಳಿದ್ದಾರೆ. ಹಣ್ಣನ್ನು ವಾಷ್ ಮಾಡಿ ಕಟ್ ಮಾಡಿಕೊಡಲು ಚೈತ್ರಾಗೆ ಉಗ್ರಂ ಮಂಜು ಹೇಳಿದ್ದಾರೆ. ಆದರೆ ಚೈತ್ರಾ ಅವರ ಮಾತಿಗೆ ಕ್ಯಾರೆ ಮಾಡದೇ ಹಣ್ಣನ್ನು ಕಚ್ಚಿ ನರಕದ ಮನೆಯೊಳಗೆ ಬಿಸಾಕಿದ್ದಾರೆ. ಆಗ ಸ್ವರ್ಗದ ನಿವಾಸಿಗಳು ಕೂಗಾಡಿದ್ದು, ರೂಲ್ಸ್ ಬ್ರೇಕ್ ಆಗಿದೆ ಎಂದು ಚೈತ್ರಾ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಆಗ ಮಂಜು ಉಗ್ರಾವತಾರಕ್ಕೆ ಉತ್ತರಿಸಿದ ಚೈತ್ರಾ, ನನ್ನನ್ನು ಯಾಕೆ ಕರೆಯಬೇಕಾಗಿತ್ತು. ಯಾಕೆ ನನ್ನನ್ನು ಪ್ರವೋಕ್ ಮಾಡಬೇಕಿತ್ತು. ನಾನು ಹಣ್ಣನ್ನು ತಿನ್ನುತ್ತೇನೆ ಎಂದು ಸವಾಲು ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಯಮುನಾ ಸೇರಿ ಹಲವರು ಚೈತ್ರಾ ಮಾಡಿರುವ ರೂಲ್ಸ್ ಬ್ರೇಕ್ ಬಗ್ಗೆ ಚಕಾರವೆತ್ತಿದ್ದಾರೆ. ಆಗ ಚೈತ್ರಾ, ನಾನು ಹೀಗೆಲ್ಲಾ ಮಾತನಾಡಬಾರದು ಅಂತ ರೂಲ್ಸ್ ಬುಕ್‌ನಲ್ಲಿದ್ರೆ ತೋರಿಸಿ ನಾನು ಮಾತನಾಡಲ್ಲ ಎಂದು ಪ್ರತಿ ಸವಾಲು ಹಾಕಿದ್ದಾರೆ. ಸೀಸನ್ 11ರ ಮೊದಲನೆ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಿಚ್ಚು ಹೊತ್ತಿಕೊಂಡಿದೆ. ಚೈತ್ರಾ ಮತ್ತು ಉಗ್ರಂ ಮಂಜು ಮಧ್ಯೆ ಬೆಂಕಿ ಹೊತ್ತಿಕೊಂಡಿದ್ದು, ಜಗಳ ತಾರಕಕ್ಕೇರಿದೆ.