ಮಂಡ್ಯ: ನೂತನವಾಗಿ ಎಂಎಸ್‍ಐಎಲ್ ಮದ್ಯದಂಗಡಿ ತೆರೆಯಲು ಮುಂದಾಗಿರೋ ಸರ್ಕಾರದ ನಡೆಯನ್ನ ವಿರೋಧಿಸಿ ಗ್ರಾಮದಲ್ಲಿ ಪರ ವಿರೋಧ ಗುಂಪುಗಳು ಹೋರಾಟ ನಡೆಸುತ್ತಿರುವುದರಿಂದ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮರಳಿಗ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇಂದು ಮರಳಿಗ ಗ್ರಾಮದಲ್ಲಿ ನೂತನವಾಗಿ ಎಂಎಸ್‍ಐಎಲ್ ಮದ್ಯದಂಗಡಿ ಉದ್ಘಾಟನೆಗೆ ತಯಾರಿ ನಡೆಸಲಾಗಿತ್ತು. ಆದ್ರೆ ಗ್ರಾಮದಲ್ಲಿ ಕುಡಿಯಲು ನೀರಿಲ್ಲ. ದನ ಕರುಗಳು ನೀರಿಲ್ಲದೇ ಬವಣೆ ಪಡುತ್ತಿವೆ. ಕುಡಿಯೋ ನೀರಿನ ಸಮಸ್ಯೆ ಬಗೆಹರಿಸಿ ಅಂತಾ ಅಧಿಕಾರಿಗಳಿಗೆ ಕೇಳಿಕೊಂಡ್ರೆ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಕೊಟ್ಟು ಯುಗಾದಿ ಹಬ್ಬಕ್ಕೆ ಎಣ್ಣೆ ಭಾಗ್ಯ ಕೊಡಲು ಹೊರಟಿದ್ದಾರೆ ಎಂದು ಗ್ರಾಮದ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.
- Advertisement 2-
- Advertisement 3-
ಇದಕ್ಕೆ ಪ್ರತಿಯಾಗಿ ಮತ್ತೊಂದು ಗುಂಪು ಊರಿನಲ್ಲಿ ಕಲಬೆರಕೆ ಮದ್ಯವನ್ನ ಅಕ್ರಮವಾಗಿ ಮಾರಲಾಗ್ತಿದೆ. ಅದರ ಬದಲು ಅಧಿಕೃತವಾಗಿ ಮದ್ಯ ಮಾರಾಟ ಮಾಡಲಿ ಎಂದು ವಾದ ಮಾಡುತ್ತಿದೆ. ಇದ್ರಿಂದ ಪರ ವಿರೋಧ ಹೋರಾಟ ಏರ್ಪಟ್ಟಿದ್ದು, ಮದ್ಯ ವಿರೋಧಿ ಹೋರಾಟಗಾರರು ಬಂದೋಬಸ್ತ್ ಗೆಂದು ಗ್ರಾಮಕ್ಕೆ ಬಂದ ಪೊಲೀಸ್ ಜೀಪ್ ತಡೆದು, ಬಿರು ಬಿಸಿಲಿನಲ್ಲಿ ಪೊಲೀಸ್ ವಾಹನದ ಕೆಳಗೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement 4-
ಘಟನೆಯಿಂದಾಗಿ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದ ರೀತಿ ವಾತಾವಣವಿದ್ದು ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ.