Connect with us

ಮಹಿಳೆಯರ ಮೇಲೆ ಬಣ್ಣ ಹಾಕಿದ್ದಕ್ಕೆ ಮಾರಾಮಾರಿ -12 ಜನರಿಗೆ ಗಾಯ

ಮಹಿಳೆಯರ ಮೇಲೆ ಬಣ್ಣ ಹಾಕಿದ್ದಕ್ಕೆ ಮಾರಾಮಾರಿ -12 ಜನರಿಗೆ ಗಾಯ

ರಾಯಚೂರು: ಹೋಳಿ ಆಚರಣೆ ವೇಳೆ ರಾಯಚೂರು ತಾಲೂಕಿನ ಕಲ್ಮಲ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ ನಡೆದಿದ್ದು 12 ಜನರಿಗೆ ಗಂಭೀರ ಗಾಯಗಳಾಗಿವೆ.

ಒಂದು ಗುಂಪಿನ ಮಹಿಳೆಯರ ಮೇಲೆ ಬಣ್ಣ ಹಾಕಿದ್ದಕ್ಕೆ ಇನ್ನೊಂದು ಗುಂಪಿನ ಯುವಕರು ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಬೆತ್ತ, ಕೊಡಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಮಲ್ಲಿಕಾರ್ಜುನ್, ಶಿವಪುತ್ರ ಎಂಬವರ ಪರಸ್ಥಿತಿ ಗಂಭೀರವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೊಡೆದಾಟದಲ್ಲಿ ಮಹಿಳೆಯರೂ ಸಹ ಗಾಯಗೊಂಡಿದ್ದಾರೆ.

ಈ ಹಿಂದೆ ಮೂರು ಬಾರಿ ಈ ಎರಡು ಗುಂಪುಗಳ ನಡುವೆ ಜಗಳಗಳಾಗಿದ್ದವು. ಹಳೆ ವೈಷಮ್ಯ ಹಿನ್ನೆಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಗಲಾಟೆಯಲ್ಲಿ ಗಾಯಗೊಂಡವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement