ಕಾರವಾರ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ (Gokarna Mahabaleshwara Temple) ಪೂಜೆಯ ಹಕ್ಕಿಗಾಗಿ ಅರ್ಚಕರ ನಡುವೆ ಗಲಾಟೆ ನಡೆದಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಭಕ್ತರಿಗೆ ದೇವರ ದರ್ಶನಕ್ಕೂ ಬಿಡದೇ ಪ್ರತಿಭಟನೆ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ದೇವಾಲಯದಲ್ಲಿ ಈ ಘಟನೆ ನಡೆದಿದೆ. ನಂದಿ ಮಂಟಪದಲ್ಲಿ ತೀರ್ಥ ನೀಡುವ ಬಾರಿಗಾಗಿ ಎರಡು ಕುಟುಂಬದವರು ಕಾದಾಡಿದ್ದಾರೆ. ಜಂಬೆ ಕುಟುಂಬ ಹಾಗೂ ಗೋಪಿ ಕುಟುಂಬ ಹಕ್ಕಿಗಾಗಿ ಕೋರ್ಟ್ ಮೊರೆ ಹೋಗಿದ್ದವು. ಇದನ್ನೂ ಓದಿ: SSLCಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ಅಂಕಿತಾಗೆ ಜಿ.ಪಂ ಸಿಇಓ ಅಭಿನಂದನೆ
ಕಳೆದ ಕೆಲವು ತಿಂಗಳಿಂದ ನಂದಿ ಮಂಟಪದಲ್ಲಿ ಜಂಬೆ ಕುಟುಂಬ ತೀರ್ಥ ನೀಡುತ್ತಿದೆ. ಇಂದಿನಿಂದ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕು ನಮ್ಮ ಬಾರಿ ಎಂದು ದೇವಸ್ಥಾನದ ಗರ್ಭಗುಡಿಯಲ್ಲಿ ಗೋಪಿ ಕುಟುಂಬ ತಗಾದೆ ತೆಗೆದಿದೆ.
ನಂದಿ ಮಂಟಪದಲ್ಲಿ ತೀರ್ಥ ಕೊಡುವ ಹಕ್ಕಿನ ವಿಷಯವಾಗಿ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದೆ. ದೇವಸ್ಥಾನದ ಒಳಗೇ ಗೋಪಿ ಕುಟುಂಬ ಪ್ರತಿಭಟನೆ ನಡೆಸಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಲು ಹರಸಾಹಸ ಪಟ್ಟರು. ಇದನ್ನೂ ಓದಿ: SSLC Result: 73.40 % ಫಲಿತಾಂಶ – ಬಾಲಕಿಯರೇ ಮೇಲುಗೈ; ಉಡುಪಿಗೆ ಮೊದಲ ಸ್ಥಾನ