ಬೆಂಗಳೂರು: ನಗರದ ಸಿಟಿ ಸಿವಿಲ್ ಕೋರ್ಟ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಸಿಬ್ಬಂದಿ ಮತ್ತು ಇಬ್ಬರು ಪೊಲಿಸರ ಮಧ್ಯೆ ಪರಸ್ಪರ ಹಲ್ಲೆ ನಡೆದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮುಂಜಾನೆ 5 ಗಂಟೆಗೆ ಮೆಟ್ರೋ ಆರಂಭವಾಗುತ್ತಿದ್ದು, ಕೆಲವೊಂದು ಕಡೆಗಳಲ್ಲಿ ಪೊಲೀಸರು ಇರಬೇಕಾಗುತ್ತದೆ. ಆದ್ರೆ ಮೆಟ್ರೋ ನಿಲ್ದಾಣದಲ್ಲಿ ಬ್ಯಾಗ್ ಸ್ಕಾನರ್ ಮತ್ತು ಮೆಟಲ್ ಡಿಟೆಕ್ಟರ್ ಆಕ್ಟಿವ್ ಆಗಿರಲಿಲ್ಲ. ಹೀಗಾಗಿ ಪ್ರಯಾಣಿಕರು ತಪಾಸಣೆ ಮಾಡದೇ ನಿಲ್ದಾಣ ಪ್ರವೇಶ ಮಾಡಲಾಗುತ್ತಿತ್ತು. ಹೀಗಾಗಿ ಮೆಟ್ರೋ ಸಿಬ್ಬಂದಿ ಪೊಲೀಸರನ್ನು ಪ್ರಶ್ನಿಸಿದ್ದಾರೆ.
Advertisement
ಕೆಲ ದಿನದಿಂದ ತಡವಾಗಿ ಬರುತ್ತಾ ಇದ್ದೀರಾ. ತುಂಬಾ ಸೆಕ್ಯುರಿಟಿ ಇರಬೇಕಾದ ಪ್ರದೇಶದಲ್ಲೇ ನೀವು ಹೀಗೆ ಮಾಡಬಾರದು. ಯಾಕಂದ್ರೆ ಏನಾದ್ರೂ ಹೆಚ್ಚು-ಕಮ್ಮಿಯಾದ್ರೆ ನಮ್ಮ ಮೇಲೆ ಬರುತ್ತೆ. ಹೀಗಾಗಿ ನಾಳೆಯಿಂದ ಬೇಗ ಬನ್ನಿ. ಇಲ್ಲವೆಂದಲ್ಲಿ ನಾವು ನಿಮ್ಮ ವಿರುದ್ಧ ದೂರು ನೀಡಬೇಕಾಗುತ್ತದೆ ಅಂತಾ ಎಚ್ಚರಿಕೆ ನೀಡಿದ್ದಾರೆ.
Advertisement
ಈ ವೇಳೆ ಮೊದಲು ಪೊಲೀಸರೇ ಮೆಟ್ರೋ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆ ನಡೆಸಿದ ಮಾಹಿತಿ ಉಳಿದ ಮೆಟ್ರೋ ಸಿಬ್ಬಂದಿಗೆ ಸಿಕ್ಕಿದ ಕೂಡಲೇ ಎಲ್ಲರೂ ಒಂದಾಗಿ ಅಧಿಕಾರಿಗಳು ಬರೋ ಮೊದಲೇ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಹೀಗಾಗಿ ಇಲ್ಲಿ ಇಬ್ಬರದ್ದೂ ತಪ್ಪು ಇರುವ ಬಗ್ಗೆ ಎದ್ದು ಕಾಣುತ್ತಿದೆ.
Advertisement
ಒಟ್ಟಿನಲ್ಲಿ ಸಿಬ್ಬಂದಿ ಎಚ್ಚರಿಕೆಗೆ ಪೊಲೀಸರು ತಲೆಬಾಗುತ್ತಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ಯಾಕಂದ್ರೆ ಮುಂದೆ ಮೆಟ್ರೋ ನಿಲ್ದಾಣದಲ್ಲಿ ಏನಾದ್ರು ಅನಾಹುತವಾದ್ರೆ ಅದು ಮೆಟ್ರೋ ಸಿಬ್ಬಂದಿ ಮೇಲೆ ಬೀಳುತ್ತದೆಯೇ ಹೊರತು ಪೊಲೀಸರ ಮೇಲಲ್ಲ ಮೆಟ್ರೋ ಸಿಬ್ಬಂದಿಗಳು ಹೇಳಿದ್ದಾರೆ.
Advertisement
https://www.youtube.com/watch?v=TekmgZWK4LQ