ಹಾಸನ: ಗ್ರಾಮ ಪಂಚಾಯಿತಿ ಅಧ್ಯಕ್ಷ ಗಾದಿಗೇರುವ ವಿಚಾರದಲ್ಲಿ ಹಳೇಬೀಡು ಗ್ರಾಮ ಪಂಚಾಯಿತಿ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಸದಸ್ಯ ಅಸ್ವಸ್ಥರಾಗಿದ್ದಾರೆ.
ಎರಡು ರಾಜಕೀಯ ಪಕ್ಷಗಳ ಬೆಂಬಲಿತ ಸದಸ್ಯರ ನಡುವೆ ಗಲಾಟೆಯಾಗಿದೆ. ಜನಪ್ರತಿನಿಧಿಗಳು ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡು ಪ್ರಜ್ಞಾಹೀನನಾಗಿ ಓರ್ವ ಸದಸ್ಯ ಕೆಳಗೆ ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 5,499 ರೂ. ಸ್ಪೀಕರ್ ಬುಕ್ ಮಾಡಿ 1 ಲಕ್ಷ ರೂ. ಕಳೆದುಕೊಂಡ ನಿವೃತ್ತ ಯೋಧ
Advertisement
Advertisement
ನಿಗದಿಯಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ನಡೆದಿತ್ತು. ಅಧ್ಯಕ್ಷರು ಆಯ್ಕೆಯಾದ ಬಳಿಕ ವಿಜಯೋತ್ಸವದ ವೇಳೆ ಗಲಾಟೆ ನಡೆದಿದೆ. ಗೆದ್ದ ಹಾಗೂ ಪರಾಜಿತ ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಪರ-ವಿರೋಧ ಸಂಬಂಧ ಎರಡು ಕಡೆಯಿಂದ ಹಳೆಬೀಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement
Advertisement
ಅಧ್ಯಕ್ಷ ಸ್ಥಾನ ಬಿಸಿಎಂ (ಎ) ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇದೇ ವಿಚಾರಕ್ಕೆ ಅಧ್ಯಕ್ಷರ ಹೆಸರು ಘೋಷಣೆಯಾದ ಬಳಿಕ ಸದಸ್ಯರು ಗಲಾಟೆ ಮಾಡಿಕೊಂಡಿದ್ದಾರೆ. ಹಳೆಬೀಡು ಗ್ರಾಪಂ 20 ಸ್ಥಾನಗಳ ಸಂಖ್ಯಾಬಲವನ್ನು ಹೊಂದಿದೆ. ನಿತ್ಯಾನಂದ ಅಧ್ಯಕ್ಷರಾಗಿ ಹಾಗೂ ಕಾಂತಾಮಣಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ವಿಜೇತ ಅಭ್ಯರ್ಥಿಯ ಪರವಾಗಿ 11 ಮತ ಹಾಗೂ ಪರಾಜಿತ ಅಭ್ಯರ್ಥಿಯ ಪರವಾಗಿ 9 ಮತಗಳ ಚಲಾವಣೆಯಾಗಿತ್ತು. ಇದನ್ನೂ ಓದಿ: ಅಂಡಮಾನ್ – ನಿಕೋಬಾರ್ ದ್ವೀಪಗಳಲ್ಲಿ 5.9 ತೀವ್ರತೆ ಭೂಕಂಪನ
Web Stories