ದೊಡ್ಮನೆಯ (Bigg Boss Kannada 11) ಆಟ 70ನೇ ದಿನದತ್ತ ಮುನ್ನುಗ್ಗುತ್ತಿದೆ. ಇನ್ನೂ ಆಟ ಬಿಟ್ಟು ಫ್ರೆಂಡ್‌ಶಿಪ್ ಅತೀ ಆದರೆ ದೊಡ್ಮನೆಯಲ್ಲಿ ಕಣ್ಣೀರು ಕಟ್ಟಿಟ್ಟ ಬುತ್ತಿ ಅನ್ನೋದು ಈಗಾಗಲೇ ಪ್ರೂವ್ ಆಗಿದೆ. ಹೀಗಿರುವಾದ ಗೌತಮಿ ಜೊತೆ ಉತ್ತಮ ಒಡನಾಟ ಹೊಂದಿದ್ದ ಮೋಕ್ಷಿತಾ ಪೈ ಇದೀಗ ರಾಂಗ್ ಆಗಿದ್ದಾರೆ. ನನ್ನ ಸ್ವಾಭಿಮಾನದ ಮುಂದೆ ಏನೂ ಇಲ್ಲ. ಯಾವುದೂ ದೊಡ್ಡದಲ್ಲ. ಕ್ಯಾಪ್ಟನ್ ಆಗಲು ಗೌತಮಿ (Gouthami) ಮುಂದೆ ತಲೆ ತಗ್ಗಿಸೋಲ್ಲ ಎಂದು ಮೋಕ್ಷಿತಾ ಪೈ ಪಟ್ಟು ಹಿಡಿದಿದ್ದಾರೆ.
ಉಗ್ರಂ ಮಂಜು, ಗೌತಮಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಮೋಕ್ಷಿತಾ (Mokshitha Pai) ಅವರಿಂದ ದೂರ ಆಗಿ ತಮ್ಮದೇ ಶೈಲಿಯಲ್ಲಿ ಆಟ ಆಡುತ್ತಿದ್ದಾರೆ. ಇದೀಗ ಕ್ಯಾಪ್ಟನ್ಸಿ ರೇಸ್‌ನಲ್ಲಿ ನಿಲ್ಲಲ್ಲು ಗೌತಮಿ ಮುಂದೆ ನಿಲ್ಲುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಕ್ಯಾಪ್ಟನ್ ಆಗೋದಕ್ಕೆ ಗೌತಮಿ ಸಹಾಯ ತೆಗೆದುಕೊಳ್ಳಲೇ ಬೇಕಾ? ಹಾಗಾದ್ರೆ ನಾನು ಆಟವನ್ನೇ ಆಡೋದಿಲ್ಲ ಅಂತ ಹಠ ಹಿಡಿದಿದ್ದಾರೆ. ಕ್ಯಾಪ್ಟನ್ಸಿ ಓಟದಲ್ಲಿಇರಬೇಕು ಅಂದ್ರೆ, ಒಬ್ಬರನ್ನ ಸಹಾಯಕ್ಕೆ ತೆಗೆದುಕೊಳ್ಳಬೇಕಿದೆ. ಎಲ್ಲರೂ ಎಲ್ಲರನ್ನ ತೆಗೆದುಕೊಂಡಿದ್ದಾರೆ. ಆದರೆ, ಕೊನೆಗೆ ಗೌತಮಿನೇ ಮೋಕ್ಷಿತಾ ಪಾಲಿಗೆ ಉಳಿದಂತೆ ಇದೆ. ಹಾಗಾಗಿಯೇ ಮೋಕ್ಷಿತಾ ಪೈ ಟೆನ್ಷನ್ ಮಾಡಿಕೊಂಡಿದ್ದಾರೆ.
ಹೌದು, ನಾನು ಗೌತಮಿ ಸಹಾಯ ತೆಗೆದುಕೊಂಡು ಕ್ಯಾಪ್ಟನ್ ಆಗೋದೇ ಇಲ್ಲ. ಆ ರೀತಿನೇ ಇದ್ದರೇ, ಆಟವನ್ನೆ ಆಡೋದಿಲ್ಲ. ಈ ಆಟದಿಂದ ದೂರವೇ ಉಳಿಯುತ್ತೇನೆ. ಗೌತಮಿಯನ್ನ ಹೋಗಿ ನಾನು ಕೇಳೋದೇ ಇಲ್ಲ. ಅದು ನನಗೆ ಆಗೋದೇ ಇಲ್ಲ ಅಂತಲೇ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ. ಐಶ್ವರ್ಯಾ ಅವರು ಇದು ಗೇಮ್ ಅಷ್ಟೇ, ವೈಯಕ್ತಿವಾಗಿ ತೆಗೆದುಕೊಳ್ಳಬೇಡಿ ಎಂದು ಬೆಂಬಲಿಸಿದ್ದಾರೆ. ಆದರೆ ಅವರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ನನ್ನ ಸೆಲ್ಫ್ ರೆಸ್ಪೆಕ್ಟ್ ಮುಂದೆ ಏನೂ ಇಲ್ಲ. ಯಾವುದು ದೊಡ್ಡದಿಲ್ಲ. ಗೌತಮಿಯಿಂದ ನಾನು ಕ್ಯಾಪ್ಟನ್ ಆಗೋದೇ ಆದ್ರೆ, ಅದು ಬೇಡವೇ ಬೇಡ. ಬಿಗ್ ಬಾಸ್ ಮನೆಗೆ ಕಳಿಸಿದರೆ ನಾನು ರೆಡಿ ಇದ್ದೇನೆ. ಹೀಗೆ ಮನೆ ಮಂದಿಯ ಮುಂದೆ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.
View this post on Instagram
ಗೌತಮಿ ಜಾದವ್ ಮಂದಹಾಸ ಬೀರಿದ್ದಾರೆ. ಮೋಕ್ಷಿತಾ ಪೈ ಸ್ಥಿತಿಗೆ ಈ ರೀತಿ ಮಾಡಿದ್ರೋ ಏನೋ? ಗೊತ್ತಿಲ್ಲ. ಆದರೆ ಇವರ ನಗುವಿನಲ್ಲೆ ಸಾಕಷ್ಟು ಅರ್ಥ ಕೂಡ ಇದೆ. ಕ್ಯಾಪ್ಟನ್ ಆಗಲು ಗೌತಮಿ ಸಹಾಯ ತೆಗೆದುಕೊಳ್ಳಲ್ಲ ಎಂದ ಮೋಕ್ಷಿತಾಗೆ ‘ಬಿಗ್ ಬಾಸ್’ ಇಲ್ಲಿ ಒಂದು ಶಾಕ್ ಕೂಡ ಕೊಟ್ಟಿದ್ದಾರೆ. ಆ ಶಾಕ್ ಏನು ಅಂದ್ರೆ, ದೊಡ್ಡ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ದೊಡ್ಡ ಬೆಲೆನೂ ಕಟ್ಟಬೇಕಾಗುತ್ತದೆ ಅಂತಲೇ ಹೇಳಿದ್ದಾರೆ. ಇದನ್ನ ಕೇಳಿದ ಉಗ್ರಂ ಮಂಜು ತಮ್ಮ ಎಂದಿನಂತೆ ನಗುವಿನೊಂದಿಗೆ ಚಪ್ಪಾಳೆ ತಟ್ಟಿ ಖುಷಿಪಟ್ಟಿದ್ದಾರೆ. ಅಂತಿಮವಾಗಿ ಏನು ಆಯ್ತು ಎಂಬುದನ್ನು ಎಪಿಸೋಡ್ ಪ್ರಸಾರ ಆಗುವವರೆಗೂ ಕಾದುನೋಡಬೇಕಿದೆ.