ದೊಡ್ಮನೆಯ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. 80 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಸ್ಪರ್ಧಿಗಳ ಅಳಿವು ಉಳಿವಿಗಾಗಿ ಹೋರಾಟ ನಡೆಯುತ್ತಿದೆ. ಹೀಗಿರುವಾಗ ಟಾಸ್ಕ್‌ವೊಂದರಲ್ಲಿ ಮನೆಯ ಪಕ್ಷಪಾತಿ ಯಾರು? ಎಂದು ಕೇಳಿದ್ರೆ ಗೌತಮಿ ಹೆಸರು ಹೇಳಿ ಮೋಕ್ಷಿತಾ (Mokshitha Pai) ನೀರಿಗೆ ತಳ್ಳಿದ್ದಾರೆ. ಇದನ್ನು ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಯುಐ ಚಿತ್ರಕ್ಕೆ ಬಾಲಿವುಡ್‌ನಲ್ಲೂ ಬಹುಪರಾಕ್
ಮಂಜು, ಮೋಕ್ಷಿತಾ, ಗೌತಮಿ (Gouthami Jadav) ನಡುವಿನ ಸ್ನೇಹಕ್ಕೆ ಬ್ರೇಕ್ ಬಿದ್ದು ಹಲವು ದಿನಗಳಾಗಿದೆ. ಮೂವರು ಜಿದ್ದಿಗೆ ಬಿದ್ದಿದ್ದು ಇದೆ. ಹೀಗಿರುವಾಗ ಗೌತಮಿ ಮೇಲೆ ಮೋಕ್ಷಿತಾ ಸೇಡು ತೀರಿಸಿಕೊಳ್ಳುವ ಕೆಲಸ ಶುರು ಮಾಡಿದ್ದಾರೆ. ಸದ್ಯ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ‘ಬಿಗ್ ಬಾಸ್’ ಟಾಸ್ಕ್‌ವೊಂದರಲ್ಲಿ ನೀಡಿದ್ದಾರೆ. ಪಕ್ಷಪಾತಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಅಶಕ್ತ, ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಅಶಕ್ತ, ಜನ ನಿರ್ವಹಣೆಯಲ್ಲಿ ಅಶಕ್ತ ಎಂಬ ಆಯ್ಕೆಗೆ ಸ್ಪರ್ಧಿಗಳನ್ನು ಸೂಚಿಸುವಂತೆ ‘ಬಿಗ್ ಬಾಸ್’ ಸೂಚನೆ ನೀಡಿದ್ದಾರೆ. ಟಾಸ್ಕ್ ಮುಂದುವರಿದ ಭಾಗವಾಗಿ ತಾವು ತೆಗೆದುಕೊಂಡ ವ್ಯಕ್ತಿಯ ಹೆಸರನ್ನು ಹೇಳಿ, ಅದಕ್ಕೆ ಸೂಕ್ತ ಕಾರಣ ನೀಡಿ ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಬೇಕು ಎಂದು ಆದೇಶ ನೀಡಿದರು.
ಅದರಂತೆಯೇ ಮೋಕ್ಷಿತಾ, ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ ಸ್ಥಾನಕ್ಕೆ ಗೌತಮಿ ಹೆಸರನ್ನು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ವಾಕ್ಸಮರ ನಡೆದಿದೆ. ನಮ್ಮ ಮೂರು ಜನರ ಫ್ರೆಂಡ್‌ಶಿಪ್ ಕಡೆವರೆಗೂ ಕಾಪಾಡುತ್ತೇನೆ ಎಂದಿದ್ರಿ ಎಂದ ಮೋಕ್ಷಿತಾಗೆ ನೀವು ಒಮ್ಮೆ ನಮ್ಮಿಂದ ದೂರಾದ ಮೇಲೆ ಆಟದ ಸಲುವಾಗಿ ನಿಮ್ಮಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದು ಗೌತಮಿ ತಿರುಗೇಟು ನೀಡಿದರು.
View this post on Instagram
ಅದಕ್ಕೆ ನಿಮಗೆ ಮಂಜುರವರು ಬೇಜಾರ್ ಆದರೆ ಫೀಲ್ ಆಗುತ್ತದೆ. ಅದೇ ಮೋಕ್ಷಿತಾಗೆ ಫೀಲ್ ಆದರೆ ಅಲ್ಲಿ ಗೌತಮಿ ಇರುತ್ತಿರಲಿಲ್ಲ ಎಂದು ಮೋಕ್ಷಿತಾ ತಿವಿದಿದ್ದಾರೆ. ಅವರ ಮಾತಿಗೆ ನನಗೆ ನಿಮ್ಮ ಹಾಗೆ ಯೋಚನೆ ಮಾಡೋಕೆ ಬರಲ್ಲ. ಇಂದಿಗೂ ಈ ಸ್ನೇಹವನ್ನು ನಿಭಾಯಿಸುತ್ತಿರೋದು ನಾನು ಎಂದಿದ್ದಾರೆ ಗೌತಮಿ. ನಂತರ ಗೌತಮಿರನ್ನು ಮೋಕ್ಷಿತಾ ನೀರಿಗೆ ತಳ್ಳಿದ್ದಾರೆ. ಇದರ ಜೊತೆಗೆ ಪಕ್ಷಪಾತಿ ವ್ಯಕ್ತಿಗಳ ಸಾಲಿನಲ್ಲಿ ಹೆಚ್ಚು ಮಂದಿ ಚೈತ್ರಾ ಕುಂದಾಪುರ ಹೆಸರನ್ನು ಟಾರ್ಗೆಟ್ ಮಾಡಿದ್ದಾರೆ.