ಬೆಂಗಳೂರು: ಕಾರ್ ಪಾರ್ಕ್ (Car Park) ಮಾಡುವ ವಿಚಾರಕ್ಕೆ ವಿದ್ಯಾರಣ್ಯಪುರ ದುರ್ಗಾ ಪರಮೇಶ್ವರಿ ದೇಗುಲದ (Durga Parameshwari Temple) ಮುಂದೆ ಗಲಭೆ ನಡೆದು ರಣಾಂಗಣವಾಗಿರುವ ಘಟನೆ ನಡೆದಿದೆ.
ಯಲಹಂಕ ಕ್ಷೇತ್ರದ ಕಾಂಗ್ರೆಸ್ ಮುಖಂಡ (Congress Leader) ಕೇಶವ ರಾಜಣ್ಣ ಅಳಿಯ ಹಾಗೂ ಆತನ ಸಹಚರರು ಸ್ಥಳೀಯರ ನಡುವೆ ಗಲಾಟೆ ಮಾಡಿಕೊಂಡಿದ್ದಾರೆ. ಹೊಸದಾಗಿ ಖರೀದಿಸಿದ್ದ ಬಿಎಂಡಬ್ಲ್ಯೂ ಕಾರಿಗೆ ಪೂಜೆ ಮಾಡಿಸಲೆಂದು ದೇಗುಲದ ಪಕ್ಕ ಇದ್ದ ಮನೆ ಮುಂದೆ ಕಾರ್ ಪಾರ್ಕ್ ಮಾಡಿದ್ದಾರೆ. ಮನೆ ಮುಂದೆ ಕಾರು ನಿಲ್ಲಿಸಬೇಡಿ ಎಂದು ಮನೆಯವರು ಮನವಿ ಮಾಡಿದ್ದಾರೆ. ಇದೇ ವಿಚಾರಕ್ಕೆ ನಡೆದ ವಾಕ್ಸಮರ ಗಲಾಟೆಗೆ ತಿರುಗಿದೆ. ಇದನ್ನೂ ಓದಿ: ನಗರಸಭೆ ಪೌರಾಯುಕ್ತೆಗೆ ಬೆದರಿಕೆ – ರಾಜೀವ್ ಗೌಡ ನಿವಾಸದ ಮೇಲೆ ಪೊಲೀಸರ ದಾಳಿ
ನಾನ್ಯಾರು ಗೊತ್ತಾ ಎಂದು ಯುವಕ ದರ್ಪ ಮೆರೆದಿದ್ದಾನೆ. ಗಲಾಟೆ ಜೋರಾಗ್ತಿದ್ದಂತೆ ಆ ಯುವಕ ದೇಗುಲದ ಒಳಗೆ ಓಡಿಹೋಗಿದ್ದಾನೆ. ಆ ಬಳಿಕ ದೇಗುಲದ ಒಳಗೂ ವಾಗ್ವಾದ ನಡೆದಿದೆ. ಈ ವೇಳೆ ಅಳಿಯನ ಸಹಚರರು ಮನೆ ಮಾಲೀಕ ಶ್ರೀನಾಥ್ & ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ರಾಜಣ್ಣ ಕಡೆಯ ಮೂವರು ಯುವಕರನ್ನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಎಲ್ಲರಿಗೂ ನೋಟಿಸ್ ಕೊಟ್ಟು ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಇದನ್ನೂ ಓದಿ: ಬೇರೊಬ್ಬಳೊಂದಿಗೆ ಏಕಾಂತದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಪಾಲಶ್ – ಸ್ಮೃತಿ ಮಂಧಾನ ಗೆಳೆಯ ವಿಧ್ಯಾನ್ ಮಾನೆ
ಇನ್ನೂ ಗಲಾಟೆ ಬಗ್ಗೆ ಮಾತನಾಡಿರುವ ದೇವಸ್ಥಾನದ ಪ್ರಧಾನ ಅರ್ಚಕ ವಸಂತ್ ಕುಮಾರ್, ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆಯಿತು. ತಾಳ್ಮೆಯಿಂದ ಇದ್ದಿದ್ರೆ ಹೀಗೆ ವಿಪರೀತ ಗಲಾಟೆ ಆಗುತ್ತಿರಲಿಲ್ಲ. ನಾವು ಯಾರಿಗೂ ರಕ್ಷಣೆ ಕೊಟ್ಟಿರಲಿಲ್ಲ. ಗಲಾಟೆ ನಡೆದಾಗ ವಾಹನ ಮಾಲೀಕ ದೇವಸ್ಥಾನ ದರ್ಶನಕ್ಕೆ ಬಂದಿದ್ರು ಅಷ್ಟೆ. ನಾವು ರಕ್ಷಣೆ ಕೊಡುವ ಪ್ರಶ್ನೆ ಇಲ್ಲ. ಗಲಾಟೆ ತಿಳಿಗೊಳಿಸಲು ಪ್ರಯತ್ನಿಸಿದ್ದೇವೆ. ದೇವಸ್ಥಾನದಲ್ಲಿ ನಡೆದ ಗಲಾಟೆಯಿಂದ ಬೇಸರವಾಯ್ತು ಎಂದು ಪ್ರತಿಕ್ರಿಯಿಸಿದ್ದಾರೆ.

