ಮಂಗಳೂರು: ಕೋಮು ಸೌಹಾರ್ದ ಜಾಥಾದಲ್ಲಿ ಭಾಗವಹಿಸಲು ಆಗಮಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಭದ್ರತೆ ನೀಡುವ ವಿಚಾರದಲ್ಲಿ ಬ್ಲಾಕ್ ಕಮಾಂಡೋಸ್ ಮತ್ತು ಜಿಲ್ಲಾ ಪೊಲೀಸರ ನಡುವೆ ವಾಗ್ಯುದ್ಧ ನಡೆದ ಘಟನೆ ಮಂಗಳೂರು ರೈಲು ನಿಲ್ದಾಣದಲ್ಲಿ ನಡೆದಿದೆ.
Advertisement
ಸಿಎಂ ಪಿಣರಾಯಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಮಾಧ್ಯಮದವರು ಮತ್ತು ಸಿಪಿಎಂ ಕಾರ್ಯಕರ್ತರು ನೂಕುನುಗ್ಗಲು ನಡೆಸಿದ್ರು. ಪೊಲೀಸರು ಹರಸಾಹಸ ಪಟ್ಟು ನಿಲ್ದಾಣದಿಂದ ಹೊರಕ್ಕೆ ಕರೆತರುತ್ತಿದ್ದಂತೆ ಅದಾಗಲೇ ರೈಲಿನಲ್ಲಿ ಬಂದು ರೆಡಿಯಾಗಿದ್ದ ಬ್ಲಾಕ್ ಕಮಾಂಡೋ ಪಡೆ ಮುಖ್ಯಮಂತ್ರಿಯನ್ನು ತಮ್ಮ ಕಾರಿನಲ್ಲಿ ಕೂರಿಸಲು ಮುಂದಾಯಿತು. ಈ ವೇಳೆ ಕರ್ನಾಟಕ ಪೊಲೀಸರು ಮತ್ತು ಕೇರಳದ ಭದ್ರತಾ ಪಡೆಯ ನಡುವೆ ಮಾತಿನ ಚಕಮಕಿ ನಡೆಯಿತು.
Advertisement
Advertisement
ಮುಖ್ಯಮಂತ್ರಿಯನ್ನು ತಮ್ಮ ಭದ್ರತೆಯಲ್ಲಿ ಒಯ್ಯಲು ಕರ್ನಾಟಕ ಪೊಲೀಸರು ರೆಡಿ ಮಾಡಿದ್ದರೂ, ಕೇರಳದ ಕಮಾಂಡೊ ಪಡೆ ಅವಕಾಶ ನೀಡಲಿಲ್ಲ. ಹೀಗಾಗಿ ಎಸ್‍ಪಿ ಶ್ರೇಣಿಯ ಅಧಿಕಾರಿ ಮತ್ತು ಬ್ಲಾಕ್ ಕಮಾಂಡೋ ಮಧ್ಯೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.
Advertisement