ಬೀದರ್: ಗಡಿ ಜಿಲ್ಲೆ ಬೀದರ್ನ ಬಿಜೆಪಿಯಲ್ಲಿ ಮೊತ್ತೊಮ್ಮೆ ಅಸಮಾಧಾನ ಸ್ಫೋಟವಾಗಿದ್ದು ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ವರ್ಸಸ್ ಮಾಜಿ ಸಚಿವ ಪ್ರಭು ಚೌಹಾಣ್ (Prabhu Chauhan) ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಈ ನಡುವೆ ಲೋಕಸಭೆಗೆ ಒಳ್ಳೆಯ ಅಭ್ಯರ್ಥಿ ತನ್ನಿ ಎಂದು ಮಾಜಿ ಸಚಿವ ಪ್ರಭು ಚೌಹಾಣ್ ಅವರು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಕಾಲಿಗೆ ಬಿದ್ದ ಪ್ರಸಂಗ ನಡೆದಿದೆ.
Advertisement
ಇಂದು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರ ಅಭಿನಂದನಾ ಸಮಾರಂಭವಿತ್ತು. ಈ ವೇಳೆ ಚೌಹಾಣ್ ಅವರು ವೇದಿಕೆಯಲ್ಲೇ 2024 ರಲ್ಲಿ ಲೋಕಸಭೆಗೆ ಒಳ್ಳೆಯ ಅಭ್ಯರ್ಥಿ ತನ್ನಿ ಎಂದು ಭಾಷಣ ಮಡುತ್ತಲೇ ಮನವಿ ಮಾಡಿಕೊಂಡರು. ಈ ಮೂಲಕ ಪ್ರಭು ಚೌಹಾಣ್ ಅವರು ಪರೋಕ್ಷವಾಗಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ಭಾಷಣದ ವೇಳೆ 10 ವರ್ಷಗಳಿಂದ ನನಗೆ ಅನ್ಯಾಯವಾಗಿದೆ. ಬೀದರ್ಗೆ ಒಳ್ಳೆಯ ಅಭ್ಯರ್ಥಿ ನೀಡಿ, ಕಾರ್ಯಕರ್ತರನ್ನ ಜೈಲಿಗೆ ಕಳುಹಿಸುವವರು ಬೇಡ, ಕಾರ್ಯಕರ್ತರಿಂದಲೇ ನಾವಿದ್ದೇವೆ ಕಾರ್ಯಕರ್ತರನ್ನ ಗೌರವಿಸುವವರಿಗೆ ಟಿಕೆಟ್ (Loksabha Election Ticket) ನೀಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: SIMI ಸಂಘಟನೆ ಮೇಲಿನ ನಿಷೇಧ ಮತ್ತೆ 5 ವರ್ಷ ವಿಸ್ತರಿಸಿದ ಕೇಂದ್ರ
Advertisement
ಈ ವೇಳೆ ಪ್ರಭು ಚೌಹಾಣ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಖೂಬಾ ಬೆಂಬಲಿಗರ ಹಾಗೂ ಪೊಲೀಸರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಾತನಾಡಿದ ಖೂಬಾ, ನಿಮ್ಮ ಕುತಂತ್ರದ ಹೇಳಿಕೆ ಮತ್ತು ಯಾರೇ ಏನೇ ಹೇಳಿದ್ರು ಸತ್ಯವಾಗಲ್ಲ. ಸಮಯ ಬಂದಾಗ ಇಂಜೆಕ್ಷನ್ ಕೊಡುವ ಕೆಲಸ ನಮ್ಮ ವರಿಷ್ಠರು ಮಾಡುತ್ತಾರೆ ಎಂದು ಪ್ರಭು ಚೌಹಾಣ್ಗೆ ತಿರುಗೇಟು ನೀಡಿದರು.