ಯುವತಿ ಮೇಲೆ ದೌರ್ಜನ್ಯ ವಿಚಾರವಾಗಿ 2 ಗುಂಪುಗಳ ನಡುವೆ ಗಲಾಟೆ – ಪೊಲೀಸ್ ಜೀಪ್ ಮೇಲೆ ಕಲ್ಲುತೂರಾಟ

Public TV
1 Min Read
Uttara Kannada

ಕಾರವಾರ: ಮುಸ್ಲಿಂ ಯುವತಿಯ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆ ಯುವಕರ 2 ಗುಂಪುಗಳ ನಡುವೆ ಗುರುವಾರ ತಡರಾತ್ರಿ ಗಲಾಟೆ ನಡೆದು ಪೊಲೀಸ್ ಜೀಪ್ (Police Jeep) ಅನ್ನು ಅಡ್ಡಗಟ್ಟಿ ಕಲ್ಲುತೂರಾಟ (Stone pelting) ನಡೆಸಿರುವ ಘಟನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಭಟ್ಕಳದ ರಂಜಾನ್ ಮಾರ್ಕೆಟ್ ಪ್ರದೇಶದಲ್ಲಿ ನಡೆದಿದೆ.

ಯುವತಿಗೆ ದೌರ್ಜನ್ಯ ಮಾಡಿದ ವಿಚಾರದಲ್ಲಿ ಹದ್ಲೂರು ನಿವಾಸಿ ಚಂದ್ರು ಸೋಮಯ್ಯಗೊಂಡ, ಸರ್ಪನಕಟ್ಟೆಯ ರವೀಂದ್ರ ಶಂಕರ ನಾಯ್ಕ, ವೆಂಕಟೇಶ್ ನಾಯ್ಕ ಗೊರಟೆ, ಸುಲ್ತಾನ್ ಸ್ಟ್ರೀಟ್ ಮೊಹಮ್ಮದ್ ಮೀರಾ, ಮೊಹ್ಮದ್ ಇಮ್ರಾನ್ ಶೇಖ್, ಸದ್ದಾಂ ಹಾಗೂ ಇತರರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರ ಎದುರೇ ಎರಡು ಗುಂಪುಗಳು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ರಂಪಾಟ ನಡೆಸಿದ್ದಾರೆ.

Uttara Kannada 1

ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ಎರಡು ಗುಂಪುಗಳಿಂದ ಚಂದ್ರ ಹಾಗೂ ಮೊಹಮ್ಮದ್ ಮೀರಾನನ್ನು ಪೊಲೀಸ್ ವಾಹನ ಹತ್ತಿಸಿದ್ದಾರೆ. ಈ ವೇಳೆ ಪೊಲೀಸ್ ವಾಹನವನ್ನು ಅಡ್ಡಗಟ್ಟಿದ ಇತರ ಆರೋಪಿಗಳು ಕಲ್ಲಿನಿಂದ ವಾಹನದ ಗಾಜು ಒಡೆದು ಹಾಕಿದ್ದಾರೆ. ಆರೋಪಿ ಮೊಹಮ್ಮದ್ ಮೀರಾ ಪೊಲೀಸ್ ಸಿಬ್ಬಂದಿ ಗೌತಮ್ ಅವರ ಬೆರಳನ್ನು ಮುರಿದಿದ್ದಾನೆ. ಇದನ್ನೂ ಓದಿ: ವಕೀಲನಂತೆ ವೇಷ ಧರಿಸಿದ್ದ ವ್ಯಕ್ತಿಯಿಂದ ದೆಹಲಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ – ಮಹಿಳೆಯ ಸ್ಥಿತಿ ಗಂಭೀರ

ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಯುವತಿಯ ಮನೆಯವರು ಯಾವುದೇ ದೂರು ನೀಡಿಲ್ಲ. ಆದರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ವಾಹನದ ಗಾಜು ಒಡೆದಿರುವ ಹಿನ್ನೆಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಒಟ್ಟು 7 ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರದೇಶದಲ್ಲಿ ಶಾಂತಿ ಕಾಪಾಡಲು ಭಟ್ಕಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಖ್ಯಾತ ಗಾಯಕ ಹನಿ ಸಿಂಗ್ ವಿರುದ್ಧ ಹಲ್ಲೆ, ಅಪಹರಣ ಕೇಸ್ ದಾಖಲು

Share This Article