ಕೋಲ್ಕತ್ತಾ: ಭಾನುವಾರ ಪಶ್ಚಿಮ ಬಂಗಾಳದ (West Bengal) ಮಾಲ್ಡಾದಲ್ಲಿ (Malda) ತೃಣಮೂಲ ಕಾಂಗ್ರೆಸ್ ಪಕ್ಷದ (TMC) ಕಾರ್ಯಕರ್ತರ 2 ಗುಂಪುಗಳ ನಡುಗೆ ಘರ್ಷಣೆ (Clash) ಏರ್ಪಟ್ಟಿದ್ದು, ಗುಂಡಿನ ದಾಳಿ ಹಾಗೂ ಸ್ಫೋಟಗಳು ನಡೆದು ಹಲವರಿಗೆ ಗಾಯಗಳಾಗಿರುವುದಾಗಿ ವರದಿಯಾಗಿದೆ.
ಮಾಲ್ಡಾ ಜಿಲ್ಲೆಯ ರಟುವಾದಲ್ಲಿ ಮದರಸಾ ಆಡಳಿತ ಸಮಿತಿಯ ಚುನಾವಣೆಗೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ಚುನಾವಣೆಗೆ ಟಿಎಂಸಿ ಹೊರತುಪಡಿಸಿ ಇತರ ಯಾವುದೇ ರಾಜಕೀಯ ಪಕ್ಷಗಳ ನಾಮನಿರ್ದೇಶನ ಮಾಡಿಲ್ಲ ಎನ್ನಲಾಗಿದೆ.
Advertisement
Advertisement
ಟಿಎಂಸಿ ಕಾಂಗ್ರೆಸ್‌ನ 2 ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಗುಂಡಿನ ದಾಳಿಗಳು ನಡೆದಿವೆ. ಘಟನೆಯಲ್ಲಿ ಮೂವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅದರಲ್ಲಿ ಒಬ್ಬರಿಗೆ ಗುಂಡು ತಗುಲಿದೆ. ಗಾಯಾಳುಗಳನ್ನು ಮಾಲ್ಡಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಲಿಲ್ಲ, ಇನ್ನು ನಾನ್ಯಾವ ಲೆಕ್ಕ: ಲಕ್ಷ್ಮೀ ಹೆಬ್ಬಾಳ್ಕರ್
Advertisement
ಗಲಾಟೆ ನಡೆಸಿದ ಎರಡೂ ಕಡೆಯವರು ಕಬ್ಬಿಣದ ರಾಡ್ ಹಾಗೂ ಬಿದಿರಿನ ಕೋಲುಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಘರ್ಷಣೆಯಲ್ಲಿ ವಾಹನಗಳು ಸೇರಿದಂತೆ ಹಲವು ಆಸ್ತಿಗಳು ಧ್ವಂಸವಾಗಿದೆ. ಪ್ರದೇಶದಲ್ಲಿ ಇದೀಗ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಳೆ ದೋಸ್ತಿಗಳ ಹೊಸ ಕುಸ್ತಿ – ಮಾತೃ ಪಕ್ಷವನ್ನು ಟಾರ್ಗೆಟ್ ಮಾಡಿದ ಗುರು, ಶಿಷ್ಯ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k