– ಪೊಲೀಸ್ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರಗಳ ಲೂಟಿ
– ನಿಷೇಧಾಜ್ಞೆ ಜಾರಿ, ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ
ಇಂಫಾಲ್: ಮಣಿಪುರದಲ್ಲಿ (Manipur) ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಉಖ್ರುಲ್ ಪಟ್ಟಣದಲ್ಲಿ (Ukhrul) ಎರಡು ಗುಂಪುಗಳ ನಡುವಿನ ಘರ್ಷಣೆ ಉಂಟಾಗಿದೆ. ಒಂದು ಗುಂಪು ಪೊಲೀಸ್ ಠಾಣೆಗೆ (Police Station) ನುಗ್ಗಿ ಶಸ್ತ್ರಾಸ್ತ್ರಗಳನ್ನು ದೋಚಿದೆ.
Advertisement
ಬುಧವಾರ ನಡೆದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪಟ್ಟಣದ ವಿವಾದಿತ ಜಮೀನನ್ನು ಸ್ವಚ್ಛಗೊಳಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಈ ಘರ್ಷಣೆ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೊಂದು ಗುಂಪು, ವಿನೋ ಬಜಾರ್‌ನಲ್ಲಿರುವ ಪೊಲೀಸ್ ಠಾಣೆಗೆ ನುಗ್ಗಿ, ಶಸ್ತ್ರಾಸ್ತ್ರ ದೋಚಿದೆ. ಇದನ್ನೂ ಓದಿ: Photo Gallery | ಮಂಗಳೂರಿನಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ – ಶಾರದಾ ಮಾತೆಗೆ ದಿವ್ಯಾಲಂಕಾರ
Advertisement
Advertisement
ಲೂಟಿಯಾದ ಶಸ್ತ್ರಾಸ್ತ್ರಗಳಲ್ಲಿ ಎಕೆ-47, ಐಎನ್‌ಎಸ್‌ಎಸ್ ರೈಫಲ್‌ಗಳು ಸೇರಿವೆ. ಈ ಬೆನ್ನಲ್ಲೇ ಉಖ್ರುಲ್ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೊಬೈಲ್ ಇಂಟರ್ನೆಟ್ ಸೇವೆ ಕೂಡ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: 1 ವರ್ಷ ಸೇವೆ ಮಾಡೋಕೆ ಚಾಮುಂಡಿ ಶಕ್ತಿ ಕೊಡಲಿ – ಪವರ್‌ಶೇರಿಂಗ್ ಸುಳಿವು ಕೊಟ್ರಾ ಸಿಎಂ?
Advertisement