ChikkamagaluruDistrictsKarnatakaLatestMain Post

ಕಾಫಿನಾಡಲ್ಲಿ ದತ್ತಮಾಲಾ ಅಭಿಯಾನ – ಕೇಸರಿ ಬಾವುಟ ವಿಚಾರಕ್ಕೆ 2 ಕೋಮುಗಳ ಮಧ್ಯೆ ಗಲಾಟೆ

ಚಿಕ್ಕಮಗಳೂರು: ಮಸೀದಿ ಮುಂಭಾಗ ಕೇಸರಿ ಬಾವುಟ ಕಟ್ಟಿದ್ದಕ್ಕೆ ಎರಡು ಕೋಮುಗಳ ನಡುವೆ ಗಲಾಟೆ ನಡೆದು ಹೊಡೆದಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ (Sringeri Pattanam) ನಡೆದಿದೆ.

ಶೃಂಗೇರಿ ಪಟ್ಟಣದ ವೆಲ್‍ಕಂ ಗೇಟ್ ಬಳಿ ಇರುವ ಮಸೀದಿ ಮುಂಭಾಗ ಜಿಲ್ಲೆಯಲ್ಲಿ ದತ್ತಮಾಲಾ ಅಭಿಯಾನ ನಡೆಯುತ್ತಿರುವ ಹಿನ್ನೆಲೆ ಶ್ರೀರಾಮಸೇನೆ ಕಾರ್ಯಕರ್ತರು ಕೇಸರಿ ಬಾವುಟ ಹಾಗೂ ಬಂಟಿಂಗ್ಸ್‌ಗಳನ್ನು ಕಟ್ಟಿದ್ದರು. ಈ ವಿಚಾರವಾಗಿ ಶ್ರೀರಾಮಸೇನೆ (Sri ramasene) ಮುಖಂಡ ಅರ್ಜುನ್ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ರಫೀಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರೂ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ಪ್ರಮಾಣ ವಚನ ಸ್ವೀಕಾರ

ಜಿಲ್ಲೆಯಲ್ಲಿ ಶ್ರೀ ರಾಮಸೇನೆ ವತಿಯಿಂದ ದತ್ತಮಾಲಾ ಅಭಿಯಾನ ನಡೆಯುತ್ತಿದೆ. ಶೃಂಗೇರಿಯಲ್ಲೂ ಶ್ರೀ ರಾಮಸೇನೆ ಕಾರ್ಯಕರ್ತರು ಮಾಲೆ ಧರಿಸಿದ್ದು, ಶೃಂಗೇರಿ ಪಟ್ಟಣದಾದ್ಯಂತ ಕೇಸರಿ ಬಾವುಟ-ಬಂಟಿಂಗ್ಸ್ ಕಟ್ಟಿದ್ದರು. ಈ ಹಿಂದೆ ನಡೆದಿದ್ದ ಕಾಂಗ್ರೆಸ್ (Congress) ರ್‍ಯಾಲಿ ವೇಳೆಯಲ್ಲಿ ಅದೇ ಜಾಗದಲ್ಲಿ ಫ್ಲೆಕ್ಸ್ ಹಾಗೂ ಬಾವುಟಗಳನ್ನು ಹಾಕಲು ಅನುಮತಿ ನೀಡಲಾಗಿತ್ತು. ಆದರೆ, ಈಗ ಕೇಸರಿ ಬಾವುಟಗಳನ್ನು ತೆರವು ಮಾಡಿಸಿರುವುದು ಸರಿಯಲ್ಲ ಎಂದು ಹಿಂದೂ ಸಂಘಟನೆಗಳು ಪಟ್ಟಣ ಪಂಚಾಯಿತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ನೋಂದಣಿ – ಧರ್ಮಸ್ಥಳ ಸಂಘದ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಸದ್ಯ ಗಲಾಟೆಯ ಬಳಿಕ ಇಬ್ಬರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಸ್ಥಳಕ್ಕೆ ಎಎಸ್‍ಪಿ ಗುಂಜನ್ ಆರ್ಯ ಭೇಟಿ ನೀಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button