ಬೆಂಗಳೂರು: ಕೋರಮಂಗಲದ ಪಬ್‌ವೊಂದರಲ್ಲಿ ಸೌತ್ ಇಂಡಿಯಾ (South India) ಹಾಡುಗಳನ್ನು ಹಾಕುವುದಕ್ಕೆ ಪಬ್ (Pub) ಸಿಬ್ಬಂದಿ ನಿರಾಕರಿಸಿದ್ದರಿಂದ ಗ್ರಾಹಕ ಮತ್ತು ಸಿಬ್ಬಂದಿ ನಡುವೆ ಕಿರಿಕ್ ನಡೆದಿದೆ.
ಪಬ್‌ನಲ್ಲಿ ಪ್ರಾದೇಶಿಕ ಭಾಷೆಯ (Regional Language) ಹಾಡುಗಳನ್ನು ಹಾಕಿ ಎಂದು ಗ್ರಾಹಕರೊಬ್ಬರು ಒತ್ತಾಯ ಮಾಡಿದ್ದರು. ಆವಾಗ, ಇಲ್ಲ ಬರೀ ಇಂಗ್ಲಿಷ್ ಹಾಡುಗಳನ್ನು ಮಾತ್ರ ಹಾಕ್ತೀವಿ, ಇಂಗ್ಲಿಷ್ ಬಿಟ್ಟು ಬೇರೆ ಹಾಡುಗಳನ್ನು ಹಾಕುವುದಿಲ್ಲ ಎಂದು ಪಬ್‌ನ ಮಹಿಳಾ ಸಿಬ್ಬಂದಿ ಪಟ್ಟು ಹಿಡಿದಿದ್ದರು. ಇದನ್ನೂ ಓದಿ: ಕಾರ್ಕಳ ಅತ್ಯಾಚಾರ ಪ್ರಕರಣ- ಆರೋಪಿಗಳು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ
Advertisement
ಈ ಘಟನೆಯನ್ನು ಗ್ರಾಹಕ ವೀಡಿಯೋ ಮಾಡಲು ಮುಂದಾದರು. ವೀಡಿಯೋ ಮಾಡುವುದನ್ನು ನೋಡಿದ ಪಬ್‌ನ ಮತ್ತೊಬ್ಬ ಸಿಬ್ಬಂದಿ ವೀಡಿಯೋ ಹೊರಗಡೆ ಬಂದರೆ ಕನ್ನಡಪರ ಸಂಘಟನೆಯವರು ಹೋರಾಟ ಮಾಡ್ತಾರೆ, ಪೊಲೀಸ್ ಕೇಸ್ ಆಗುತ್ತೆ ಎಂದು ಭಯಪಟ್ಟು ಕನ್ನಡ ಹಾಡು ಹಾಕುವುದಕ್ಕೆ ಒಪ್ಪಿಗೆ ನೀಡಿದ್ದರು. ಕನ್ನಡ ಹಾಡು ಮಾತ್ರ ಹಾಕುತ್ತೇವೆ. ಆದರೆ ತೆಲುಗು ಮತ್ತು ತಮಿಳು ಹಾಡುಗಳನ್ನು ಹಾಕುವುದಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದರು. ಇದನ್ನೂ ಓದಿ: ಎಸ್‌ಸಿಒ ಸಭೆಗೆ ಮೋದಿಗೆ ಆಹ್ವಾನ ನೀಡಿದ ಪಾಕ್ – ಪ್ರಧಾನಿ ಭಾಗವಹಿಸೋದು ಡೌಟ್
Advertisement
Advertisement
ಒಂದು ವೇಳೆ ವೀಡಿಯೋ ಮಾಡಿ ಗಟ್ಟಿ ಧ್ವನಿಯಲ್ಲಿ ಕೇಳಿದರೆ ಮಾತ್ರ ಕನ್ನಡ ಹಾಡುಗಳನ್ನು ಹಾಕುತ್ತಾರೆ ಎಂದು ಗ್ರಾಹಕ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಕಾರಿಗೆ KSRTC ಬಸ್ ಡಿಕ್ಕಿ – ಐವರಿಗೆ ಗಾಯ