ಮಣಿಪುರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು – 44 ಶಾಸಕರ ಬೆಂಬಲವಿದೆ ಎಂದ ಎನ್‌ಡಿಎ

Public TV
1 Min Read
Ajay Kumar Bhalla

– ಬಿಜೆಪಿಯ 8 ಶಾಸಕರು ಸೇರಿ 10 ಎನ್‌ಡಿಎ MLAಗಳಿಂದ ರಾಜ್ಯಪಾಲರ ಭೇಟಿ

ಇಂಪಾಲ್: ಮಣಿಪುರದಲ್ಲಿ (Manipur) ಹೊಸ ಸರ್ಕಾರ ರಚಿಸಲು 44 ಶಾಸಕರ ಬೆಂಬಲ ಇದೆ ಎಂದು ಬಿಜೆಪಿ ಶಾಸಕ ಥೋಕ್ಚೋಮ್ ರಾಧೇಶ್ಯಾಮ್ ಸಿಂಗ್ ತಿಳಿಸಿದ್ದಾರೆ.

ಥೋಕ್ಚೋಮ್ ರಾಧೇಶ್ಯಾಮ್ ಸಿಂಗ್ (Thockchom Radheshyam Singh) ಸೇರಿದಂತೆ 10 ಶಾಸಕರು ಇಂದು ರಾಜಭವನಕ್ಕೆ ಭೇಟಿ ನೀಡಿ, ಸರ್ಕಾರ ರಚನೆ ಕುರಿತು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ (Ajay Kumar Bhalla) ಅವರೊಂದಿಗೆ ಚರ್ಚಿಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವಸೂಲಿ ಮಾಡೋ ಉದ್ದೇಶ: ನಿಖಿಲ್

ಬಳಿಕ ಮಾತನಾಡಿದ ರಾಧೇಶ್ಯಾಮ್, ಜನರ ಇಚ್ಛೆಯಂತೆ ಹೊಸ ಸರ್ಕಾರ ರಚಿಸಲು ಬಿಜೆಪಿ ಸಿದ್ಧವಿದೆ. ಇದಕ್ಕೆ 44 ಶಾಸಕರ ಬೆಂಬಲ ಇದೆ. ನಾವು ಇದನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ. ಸರ್ಕಾರ ರಚನೆಯ ಸಮಸ್ಯೆಗೆ ಯಾವ ಪರಿಹಾರಗಳಿವೆ ಎಂಬುದರ ಕುರಿತು ನಾವು ಚರ್ಚಿಸಿದ್ದೇವೆ. ರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪಾರ್ಕಿಂಗ್‌ ವಿಚಾರಕ್ಕೆ ಕಿರಿಕ್‌ – ನೆರೆಮನೆಯವನ ಮೂಗು ಕಚ್ಚಿದ ಭೂಪ!

ಸರ್ಕಾರ ರಚನೆಗೆ ಹಕ್ಕು ಮಂಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಕೇಂದ್ರ ನಾಯಕತ್ವ ನಿರ್ಧಾರ ತೆಗೆದುಕೊಳ್ಳಲಿದೆ. ವಿಧಾನಸಭಾಧ್ಯಕ್ಷ ಸತ್ಯಬ್ರತಾ ಅವರು 44 ಶಾಸಕರನ್ನು ಒಟ್ಟಿಗೆ ಕೂರಿಸಿ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಸರ್ಕಾರ ರಚನೆಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ ಎಂದರು. ಇದನ್ನೂ ಓದಿ: ರಾಯಚೂರು | ಭಾವಚಿತ್ರ ಸುಟ್ಟು ಕಮಲ್ ಹಾಸನ್ ವಿರುದ್ಧ ಆಕ್ರೋಶ

Share This Article