ಗಡಿಜಿಲ್ಲೆ ದೇಗುಲಗಳಿಗೆ ಕುಟುಂಬ ಸಮೇತ ಸಿಜೆಐ  ಭೇಟಿ

Public TV
0 Min Read
CJI visits temples in border district with family

ಚಾಮರಾಜನಗರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಕುಟುಂಬ ಸಮೇತರಾಗಿ ಬಿಳಿಗಿರಿರಂಗನ ಬೆಟ್ಟ, ಹರಳುಕೋಟೆ ಆಂಜನೇಯ ಸನ್ನಿಧಿಗೆ ಭೇಟಿ ನೀಡಿದರು.

ಯಳಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರೆ ಸ್ಥಳವಾದ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥನಿಗೆ ವಿಶೇಷ ಪೂಜೆ, ಅರ್ಚನೆ ಮಾಡಿಸಿದರು. ಬಳಿಕ, ಬಿಳಿಗಿರಿರಂಗನ ಬೆಟ್ಟದಿಂದ ಕೆ.ಗುಡಿಗೆ ಬಂದು ಅರಣ್ಯ ಸೌಂದರ್ಯ ವೀಕ್ಷಿಸಿದರು.

ಚಾಮರಾಜನಗರದ ಹರಳುಕೋಟೆ ಆಂಜನೇಯ ಸನ್ನಿಧಿಗೆ ಭೇಟಿ ನೀಡಿ ಹನುಮನ ದರ್ಶನ ಪಡೆದು ಅರ್ಚನೆ ಮಾಡಿಸಿದರು. ಹರಳುಕೋಟೆ ಆಂಜನೇಯಸ್ವಾಮಿ ದೇಗುಲವು ಬಬ್ರುವಾಹನನಿಂದ ಸ್ಥಾಪಿತಗೊಂಡ ಮೂರ್ತಿ ಎಂಬ ನಂಬಿಕೆ ಇದ್ದು ಪುರಾಣ ಐತಿಹ್ಯ ಹಾಗೂ ಇತಿಹಾಸ ಇದೆ.

Share This Article