ಬೆಂಗಳೂರು: ಮೈಸೂರು ಪೇಟದ ಗಮ್ಮತ್ತೇ ಅಂಥಾದ್ದು. ಒಮ್ಮೆ ಮೈಸೂರು ಪೇಟಾವನ್ನು ಮುಡಿಗೇರಿಸಿಕೊಂಡವರು ಅಷ್ಟು ಸುಲಭಕ್ಕೆ ಅದನ್ನು ಕೆಳಗಿಳಿಸಲು ಇಷ್ಟಪಡಲ್ಲ. ಇದಕ್ಕೆ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೂ ಹೊರತಲ್ಲ ಅಂದರೆ ಅತಿಶಯೋಕ್ತಿಯಲ್ಲ. ಬೆಂಗಳೂರಿನ ಜಿಕೆವಿಕೆಯಲ್ಲಿ ಇವತ್ತಿಂದ ಎರಡು ದಿನಗಳ ಕಾಲ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನ ಆರಂಭವಾಗಿದೆ. ಸಮ್ಮೇಳನದಲ್ಲಿ ಭಾಗವಹಿಸಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆಯವರು ಮೈಸೂರು ಪೇಟಾಕ್ಕೆ ಮನಸೋತ ಅಪರೂಪದ ಪ್ರಸಂಗ ನಡೆಯಿತು.
ಸಮ್ಮೇಳನದಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಅತ್ಯಂತ ಗೌರವಾದರಗಳಿಂದ ಸನ್ಮಾನ ಮಾಡಲಾಯ್ತು. ಆದರೆ ಮೈಸೂರು ಪೇಟಾದ ಆ ನಯ, ಸೊಬಗು, ಮೆರುಗಿಗೆ ಮಾರು ಹೋದರು. ಮುಖ್ಯ ನ್ಯಾಯಮೂರ್ತಿಗಳು, ಸನ್ಮಾನದ ನಂತರವೂ ಮೈಸೂರು ಪೇಟಾ ಮತ್ತು ಶಾಲನ್ನು ತೆಗೆಯದೇ ಹಾಗೇ ಗೌರವಯುತವಾಗಿ ಅವುಗಳನ್ನು ಧರಿಸಿಕೊಂಡೇ ವೇದಿಕೆಯಲ್ಲಿ ಕುಳಿತರು.
Advertisement
Advertisement
ಮೈಸೂರು ಪೇಟಾದ ಮೇಲೆ ಇರುವ ಗೌರವ ಮತ್ತು ಪ್ರೀತಿಯಿಂದ ಕಾರ್ಯಕ್ರಮದ ಪೂರ್ತಿ ಪೇಟ ಧರಿಸಿಕೊಂಡೇ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆಯವರು ಕೂತಿದ್ದರು. ಆಯೋಜಕರು ಮೈಸೂರು ಪೇಟಾ ತೆಗೆಯಲು ಗೌರವದಿಂದಲೇ ಮುಂದಾದಾಗ ಬೇಡ ಇರಲಿ ಎಂದು ಅವುಗಳನ್ನು ಧರಿಸಿಯೇ ವೇದಿಕೆ ಮೇಲೆ ಕುಳಿತಿದ್ದರು.
Advertisement
ಮುಖ್ಯಮಂತ್ರಿ ಶ್ರೀ @BSYBJP ಅವರು ಜಿಕೆವಿಕೆಯಲ್ಲಿ ಆಯೋಜಿಸಿದ್ದ 19ನೇ ನ್ಯಾಯಾಂಗ ಅಧಿಕಾರಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಶ್ರೀ ಶರದ್ ಅರವಿಂದ್ ಬೋಬ್ಡೆ, ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ಅಭಯ್ ಶ್ರೀನಿವಾಸ ಓಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. pic.twitter.com/H464Fa3ELk
— CM of Karnataka (@CMofKarnataka) January 11, 2020
Advertisement
ಇನ್ನು ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ ಅವರಿಗೂ ಸನ್ಮಾನ ಮಾಡಲು ಆಯೋಜಕರು ಮುಂದಾದದರು. ಆದರೆ ಸಿಎಂ, ಸನ್ಮಾನ ಸ್ವೀಕಾರಕ್ಕೆ ಹಿಂದೇಟು ಹಾಕಿದರು. ನನಗೆ ಸನ್ಮಾನ ಬೇಡ ಸರ್ವೋಚ್ಚ ನ್ಯಾಯಮೂರ್ತಿಗಳಿಗೆ ಸಾಕು. ನನಗೆ ಸನ್ಮಾನ ಬೇಡ ಎಂದು ನಯವಾಗಿ ನಿರಾಕರಿಸಿದರು. ಬಳಿಕ ಸಿಎಂ ಅವರಿಗೆ ನ್ಯಾಯಾಂಗ ಕ್ಷೇತ್ರದ ಅಧಿಕಾರಿಗಳಿಂದ ಸನ್ಮಾನ ಸ್ವೀಕರಿಸುವಂತೆ ಒತ್ತಾಯ ಮಾಡಲಾಯ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಶ್ರೀ ಶರದ್ ಅರವಿಂದ್ ಬೋಬ್ಡೆ ಅವರು ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ಅಭಯ ಶ್ರೀನಿವಾಸ ಓಕಾ, ಮುಖ್ಯಮಂತ್ರಿ ಶ್ರೀ @BSYBJP ಉಪ ಮುಖ್ಯಮಂತ್ರಿ @GovindKarjol, ಸಚಿವ @JCMBJP ಉಪಸ್ಥಿತರಿದ್ದರು. pic.twitter.com/Hv50Dq6Rng
— CM of Karnataka (@CMofKarnataka) January 11, 2020
ವೇದಿಕೆಯಲ್ಲಿ ಒತ್ತಾಯ ಮಾಡಿದ್ದರಿಂದ ಸಿಎಂ ಸನ್ಮಾನ ಸ್ವೀಕರಿಸಲೇಬೇಕಾಯ್ತು. ಆದರೆ ಸನ್ಮಾನ ಸ್ವೀಕರಿಸಿದ ವೇಳೆ ತಲೆಗೆ ಮೈಸೂರು ಪೇಟಾ ಹಾಕಲು ಮುಂದಾದಾಗ ಬೇಡ ನಿರಾಕರಿಸಿ, ಪೇಟಾವನ್ನ ಕೈಯಲ್ಲೇ ಸಿಎಂ ಪಡೆದುಕೊಂಡರು.