ನವದೆಹಲಿ: ನನ್ನಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಇರಲಿ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ (CII) ಚಂದ್ರಚೂಡ್ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತರಾದ ಸಿಜೆಐ ಚಂದ್ರಚೂಡ್ ಅವರು ಶುಕ್ರವಾರ ಕೋರ್ಟ್ ಹಾಲ್‌ನಲ್ಲಿ ಸಹದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ, ನ್ಯಾಯಾಲಯವೇ ನನ್ನನ್ನು ಮುಂದುವರೆಸುತ್ತದೆ. ನಮ್ಮ ಅರಿವಿಗೆ ಬಾರದಂತೆ ಎಷ್ಟೋ ಜನರನ್ನು ಭೇಟಿಯಾಗಿರುತ್ತೇವೆ. ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನಿಂದ ತಪ್ಪಾಗಿದ್ದರೆ ಅಥವಾ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಹೇಳಿದ್ದಾರೆ.
ಮುಂದಿನ ಸಿಜೆಐ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ವಿಚಾರವಾಗಿ, ಅವರು ತುಂಬಾ ಗಟ್ಟಿಯಾದ ವ್ಯಕ್ತಿಯಾಗಿದ್ದಾರೆ. ನ್ಯಾಯಕ್ಕೆ ಬದ್ಧರಾಗಿದ್ದಾರೆ ಎಂದು ಸಂತೋಷದಿಂದ ನಿರ್ಗಮಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಇನ್ನೂ ಇದೇ ವೇಳೆ ನಾನು ಹೆಚ್ಚು ಟ್ರೋಲಾದ ಜಡ್ಜ್‌ಗಳಲ್ಲಿ ಒಬ್ಬ ಎಂದು ಹೇಳಿಕೊಂಡು, ಶಾಯರಿ ಒಂದನ್ನು ಉಲ್ಲೇಖಿಸಿ ಹಾಸ್ಯ ಚಟಾಕಿ ಸಿಡಿಸಿದ್ದಾರೆ.
49ನೇ ಸಿಜೆಐ ಉದಯ್ ಉಮೇಶ್ ನಿವೃತ್ತದ ಬಳಿಕ, 2022ರ ನ.08ರಂದು 50ನೇ ಸಿಜೆಐ ಆಗಿ ಡಿ.ವೈ.ಚಂದ್ರಚೂಡ್ ಹುದ್ದೆ ಅಲಂಕರಿದ್ದರು. ಈಗ ಇವರ ಅಧಿಕಾರ ಅವಧಿ ಮುಕ್ತಾಯಗೊಂಡಿದೆ. 51ನೇ ಸಿಜೆಐ ಆಗಿ ಸಂಜೀವ್ ಖನ್ನಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.