– ಆಯುರ್ವೇದದಿಂದಲೇ ಕೊರೊನಾವನ್ನು ಮಣಿಸಿದೆ
– ಕಳೆದ ಐದು ತಿಂಗಳಿಂದ ಸಂಪೂರ್ಣ ಸಸ್ಯಾಹಾರ ಸೇವನೆ
ನವದೆಹಲಿ: ಕೊರೊನಾ (Covid-19) ಕಾಲದಲ್ಲಿ ಹಾಗೂ ಅದರ ವಿರುದ್ಧದ ಹೋರಾಟದ ಬಳಿಕ ಆಯುಷ್ – ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯೊಂದಿಗಿನ ತಮ್ಮ ಅನುಭವವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (Chief Justice of India DY Chandrachud) ಹಂಚಿಕೊಂಡಿದ್ದಾರೆ. ಅಲ್ಲದೇ ಕೋವಿಡ್‍ನಿಂದ ಬಳಲುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕರೆ ಮಾಡಿ ಸೂಕ್ತ ಸಲಹೆ ನೀಡಿದ್ದರ ಬಗ್ಗೆ ಸಹ ಅವರು ಹೇಳಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ಆವರಣದಲ್ಲಿ ಆಯುಷ್ ಹೋಲಿಸ್ಟಿಕ್ ವೆಲ್ನೆಸ್ ಸೆಂಟರ್‌ನ್ನು (YUSH Holistic Wellness Centre) ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‍ನಿಂದ ಬಳಲುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ ಮಾತಾಡಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಪ್ರಧಾನಿಗಳು ಕರೆಮಾಡಿ ನಿಮ್ಮ ಆರೋಗ್ಯ ಉತ್ತಮ ಸ್ಥಿತಿಯಲ್ಲಿಲ್ಲ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಿಮಗೆ ಬೇಕಾದ ಅಗತ್ಯ ಸಹಾಯವನ್ನು ನಾವು ಮಾಡುತ್ತೇವೆ. ಆಯುಷ್‍ನ ವೈದ್ಯರು ಹಾಗೂ ಕಾರ್ಯದರ್ಶಿ ಒಬ್ಬರಿಗೆ ಕರೆ ಮಾಡಿ ಔಷಧವವನ್ನು ಕಳಿಸುತ್ತಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಕ್ಬರ್, ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡಿ- ಕೋಲ್ಕತ್ತಾ ಹೈಕೋರ್ಟ್ ಸೂಚನೆ
ಎರಡನೇ ಮತ್ತು ಮೂರನೇ ಬಾರಿ ನನಗೆ ಕೋವಿಡ್ ಬಂದಾಗ, ನಾನು ಯಾವುದೇ ಅಲೋಪತಿ ಔಷಧವನ್ನು ತೆಗೆದುಕೊಳ್ಳಲಿಲ್ಲ. ನಾನು ಪ್ರತಿನಿತ್ಯ ಬೆಳಗ್ಗೆ 3:30ಕ್ಕೆ ಎದ್ದು ಯೋಗ ಮಾಡುತ್ತೇನೆ. ಸಸ್ಯಾಹಾರವನ್ನು ಅನುಸರಿಸುತ್ತಿದ್ದೇನೆ, ಕಳೆದ ಐದು ತಿಂಗಳಿಂದ ಸಂಪೂರ್ಣವಾಗಿ ಸಸ್ಯಾಹಾರವನ್ನು ಸೇವಿಸುತ್ತಿದ್ದೇನೆ. ಈ ಕ್ರಮವನ್ನು ನಾನು ಮುಂದುವರಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಆಯುಷ್ ಹೋಲಿಸ್ಟಿಕ್ ವೆಲ್ನೆಸ್ ಸೆಂಟರ್ ನ್ಯಾಯಾಧೀಶರು, ಅವರ ಕುಟುಂಬಗಳು ಮತ್ತು ಸುಪ್ರೀಂ ಕೋರ್ಟ್‍ನ ಸಿಬ್ಬಂದಿ ಸದಸ್ಯರಲ್ಲಿ ಆಯುರ್ವೇದ ಮತ್ತು ಸಮಗ್ರ ಜೀವನಶೈಲಿ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಈ ಸೌಲಭ್ಯಗಳನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಉತ್ತಮ ಚಿಕಿತ್ಸಾ ಕೊಠಡಿಗಳು, ವಿಶ್ರಾಂತಿ ಕೊಠಡಿಗಳು ಉತ್ತಮವಾಗಿವೆ ಎಂದಿದ್ದಾರೆ. ಇದನ್ನೂ ಓದಿ: ಹ್ಯಾರಿಸ್‍ಗೆ ಸಂಕಷ್ಟ – ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಸ್ತು