ನವದೆಹಲಿ: ತನ್ನ ಸಾಲ ತೀರಿಸಲು 5 ವರ್ಷದ ಮಗುವನ್ನ ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟ ಯುಪಿಸ್‍ಸಿ ಆಕಾಂಕ್ಷಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆಸಿಫ್ ಸೈಫಿ(27) ಬಂಧಿತ ಆರೋಪಿ. ಈತ ದೆಹಲಿಯ ಭಜನ್‍ಪುರ ಪ್ರದೇಶದಿಂದ ಮಗುವನ್ನ ಕಿಡ್ನಾಪ್ ಮಾಡಿದ್ದ. ಬಾಲಿವುಡ್ ಸಿನಿಮಾದಿಂದ ಪ್ರೇರಣೆಗೊಂಡಿದ್ದ ಈತ, ಅದರಲ್ಲಿನ ಡೈಲಾಗ್‍ಗಳನ್ನ ಪ್ರಾಕ್ಟೀಸ್ ಮಾಡಿ ನಂತರ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಎಂ.ಟೆಕ್ ಪೂರೈಸಿರೋ ಸೈಫಿ, ನಾಗರೀಕ ಸೇವಾ ಪರೀಕ್ಷೆಗಾಗಿ ತಯಾರಾಗುತ್ತಿದ್ದ. ಆದ್ರೆ ಆತ ಸಾಲದಲ್ಲಿ ಮುಳುಗಿದ್ದ. ವ್ಯಕ್ತಿಯೊಬ್ಬರು ಈತನಿಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದ್ದು, ಅವರಿಗೆ ಕೊಡಲು 4-5 ಲಕ್ಷ ರೂ. ಸಾಲ ಪಡೆದಿದ್ದ. ಆದ್ರೆ ಆ ವ್ಯಕ್ತಿ ಈತನಿಗೆ ಮೋಸ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
Advertisement
ಹಣ ಮಾಡಬೇಕೆಂಬ ಉದ್ದೇಶದಿಂದ ಸೈಫಿ 5 ವರ್ಷದ ಮಗುವನ್ನ ಪತ್ತೆಹಚ್ಚಿ ಆ ಮಗುವಿನ ತಂದೆಯ ಫೋನ್ ನಂಬರ್ ಕಲೆ ಹಾಕಿದ್ದ. ಒಂದು ದಿನ ಆರೋಪಿ ಸೈಫಿ ಮಗುವನ್ನ ಹೊತ್ತೊಯ್ದು ಗುಡಿಸಲಿನಲ್ಲಿ ಇರಿಸಿದ್ದ. ನಂತರ ಬೇರೆ ಬೇರೆ ಫೋನ್‍ಗಳಿಂದ ಮಗುವಿನ ತಂದೆಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಂದು ತಿಳಿಸಿದ್ದಾರೆ.
Advertisement
ಕೊನೆಗೆ ಸೈಫಿಯನ್ನ ಬುಧವಾರದಂದು ಉತ್ತರಪ್ರದೇಶದ ದಾದ್ರಿಯಲ್ಲಿ ಬಂಧಿಸಲಾಗಿದ್ದು, ಮಗುವನ್ನ ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.