ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಸಿವಿಲ್ ಪೊಲೀಸರು ನಮಗೂ ಮಾಸ್ಕ್ ಕೊಡಿ ಎಂದು ಹಿರಿಯ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.
ಪ್ರಮುಖವಾಗಿ ನಗರದ ವಿಧಾನಸೌಧದಲ್ಲಿ ಭದ್ರತೆ ಪರಿಶೀಲನೆ ನಡೆಸುವ ಪೊಲೀಸರಿಗೆ ಮಾಸ್ಕ್ ನೀಡದೇ ಇರೋದು ಕೆಲ ಅಧಿಕಾರಿಗಳ ಬೇಸರಕ್ಕೆ ಕಾರಣವಾಗಿದೆ. ಕೊರೊನಾ ವೈರಸ್ ಭೀತಿ ಹಿನ್ನೆಲೆ ಎರಡು ದಿನಗಳ ಹಿಂದೆ ಟ್ರಾಫಿಕ್ ಪೊಲೀಸರಿಗೆ ಇಲಾಖೆಯ ವತಿಯಿಂದಲೇ ಮಾಸ್ಕ್ ನೀಡಲಾಗಿದೆ. ರಾತ್ರಿ ವೇಳೆ ಡಿಡಿ ಚೆಕ್ ಮಾಡೋ ವೇಳೆ ಪೊಲೀಸರು ವಾಹನ ಸವಾರರ ಹತ್ತಿರಕ್ಕೆ ಹೋಗಿ ತಪಾಸಣೆ ಮಾಡಬೇಕಾಗುತ್ತದೆ. ಹೀಗಾಗಿ ನಮಗೂ ಭದ್ರತಾ ದೃಷ್ಟಿಯಿಂದ ಮಾಸ್ಕ್ ನೀಡಬೇಕು, ಇಲ್ಲವಾದರೆ ತಪಾಸಣೆ ಮಾಡೋದು ಕಷ್ಟ ಎಂದು ಟ್ರಾಫಿಕ್ ಪೊಲೀಸರು ಡಿಡಿ ಚೆಕ್ ಮಾಡೋಕೆ ಹಿಂದೇಟು ಹಾಕಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು, ಎಲ್ಲಾ ಟ್ರಾಫಿಕ್ ಪೊಲೀಸರಿಗೂ ಮಾಸ್ಕ್ ನೀಡಿತ್ತು.
Advertisement
Advertisement
ಆದರೆ ಸಿವಿಲ್ ಪೊಲೀಸರಿಗೆ ಯಾವುದೇ ಮಾಸ್ಕ್ ನೀಡಿರಲಿಲ್ಲ. ಅದರಲ್ಲೂ ವಿಧಾನಸೌಧ, ಶಾಸಕರ ಭವನ, ರಾಜಕೀಯ ಮುಖಂಡರ ಮನೆ ಬಳಿ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಮಾಸ್ಕ್ ನೀಡದೇ ಇರೋದು ಸಿವಿಲ್ ಪೊಲೀಸರ ಅಸಮಾಧಾನಕ್ಕೆ ಕಾರಣವಾಗಿದೆ.
Advertisement
ಟ್ರಾಫಿಕ್ ಪೊಲೀಸರಿಗೆ ಮಾಸ್ಕ್ ನೀಡಿದ್ದಾರೆ, ನಾವು ಕೂಡ ಅವರಂತೆಯೇ ವಾಹನಗಳು, ವ್ಯಕ್ತಿಗಳನ್ನು ತಪಾಸಣೆ ಮಾಡಬೇಕು. ಆದರೂ ನಮಗೆ ಇನ್ನೂ ಮಾಸ್ಕ್ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಅದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.