ಚಾಮರಾಜನಗರ: ಸುಗಂಧ ಸೂಸುವ ಅಪರೂಪದ ಪ್ರಾಣಿಯಾದ ಪುನುಗು ಬೆಕ್ಕು ದಿಢೀರನೇ ಮನೆಗೆ ಎಂಟ್ರಿ ಕೊಟ್ಟಿದ್ದ ಘಟನೆ ಚಾಮರಾಜನಗರದ ರಾಮಸಮುದ್ರದಲ್ಲಿ ನಡೆದಿದೆ.
Advertisement
ರಾಮಸಮುದ್ರ ಗ್ರಾಮದ ಶಿವಮ್ಮ ಎಂಬುವರ ಮನೆಗೆ ದಿಢೀರ್ ಆಗಿ ಪುನುಗು ಬೆಕ್ಕು ಎಂಟ್ರಿಕೊಟ್ಟಿತ್ತು. ಪುನುಗು ಬೆಕ್ಕು ಸುಗಂಧ ಹೊರ ಸೂಸುವ ಪ್ರಾಣಿಯಾಗಿದ್ದು, ಬೆಕ್ಕಿನಂತೆಯೇ ದೇಹ ರಚನೆ, ಉದ್ದನೆಯ ಬಾಲ ಮತ್ತು ಮುಖ ಲಕ್ಷಣಗಳನ್ನು ಹೊಂದಿದೆ. ಇದು ದಟ್ಟ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನೂ ಓದಿ: ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ
Advertisement
ಪುನುಗು ಬೆಕ್ಕನ್ನು ಕಂಡ ಮನೆಯವರು ಉರಗಪ್ರೇಮಿ ಸ್ನೇಕ್ ಚಾಂಪ್‍ಗೆ ತಿಳಿಸಿದ್ದಾರೆ. ಸ್ನೇಕ್ ಚಾಂಪ್ ಬೆಕ್ಕನ್ನು ರಕ್ಷಿಸಿ ಬಿಆರ್‌ಟಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಪುನುಗು ಬೆಕ್ಕು ಜನನಾಂಗದ ಗ್ರಂಥಿಯಿಂದ ಸುಗಂಧ ದ್ರವ್ಯ ಬಿಡುಗಡೆ ಮಾಡುತ್ತದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆ ಯುಕ್ತ ಇದರ ಮೂತ್ರ ಜೇನು ತುಪ್ಪದಂತಿರುತ್ತದೆ. ಇದನ್ನು ಸುವಾಸನೆ ದ್ರವ್ಯಗಳಲ್ಲಿ ಪರಿಮಳ ಹೆಚ್ಚಿಸುವ ವಸ್ತುವಾಗಿ ಬಳಕೆ ಮಾಡಲಾಗುತ್ತದೆ. ಅಳಿವಿನಂಚಿನಲ್ಲಿರುವ ಪ್ರಾಣಿ ಇದಾಗಿದೆ ಎಂದು ಬೆಕ್ಕಿನ ಕುರಿತಾಗಿ ಸ್ನೇಕ್ ಚಾಂಪ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜೀಸಸ್ ಸುಪ್ರೀಂ ಎಂದಿದ್ದ ವ್ಯಕ್ತಿಗೆ ಪಾಕ್‌ನಲ್ಲಿ ಗಲ್ಲು ಶಿಕ್ಷೆ