ಬೆಂಗಳೂರು: ಇಂದು ಮಧ್ಯಾಹ್ನ ಬೆಂಗಳೂರು ಉಚ್ಚ ನ್ಯಾಯಾಲಯದ ದ್ವಾರದ ಬಳಿ ಹಿಂದೂ ವಿದಿಜ್ಞ ಪರಿಷತ್ ಮತ್ತು ಅದಿವಕ್ತಾ ಪರಿಷತ್ ಜಂಟಿಯಾಗಿ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಸಮರ್ಥನಾ ಸಭೆಯನ್ನು ಆಯೋಜನೆ ಮಾಡಲಾಗಿತ್ತು.
ಈ ಸಭೆಯಲ್ಲಿ ಹಿಂದೂ ವಿದಿಜ್ಞ ಪರಿಷತ್ ವಕೀಲರಾದ ಜಿ. ಎಮ್ ನಟರಾಜ, ಪ್ರಸನ್ನ ಡಿ.ಪಿ, ರುದ್ರಪ್ಪ, ಆದಿತ್ಯ ಮತ್ತು ಅಧಿವಕ್ತಾ ಪರಿಷತ್‍ನ ವಿವೇಕ ರೆಡ್ಡಿ ಸೇರಿ ನೂರಾರು ವಕೀಲರು ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಘೋಷಣೆಯನ್ನು ಕೂಗಿ ಬೆಂಬಲ ಸೂಚಿಸಿದರು.
Advertisement
Advertisement
ಈ ಬಗ್ಗೆ ವಿವೇಕ ರೆಡ್ಡಿಯವರು ಮಾತನಾಡಿ, ಇದು ಕೇಂದ್ರ ಸರ್ಕಾರದ ಮಹತ್ವದ ಕಾಯ್ದೆ ಇದಾಗಿದ್ದು, ಇದು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ಥಾನದಲ್ಲಿ ಇರುವ ದಲಿತರಿಗೆ, ನೊಂದ ಮಹಿಳೆಯರಿಗೆ ಮಾನವೀಯತೆಯ ಆಧಾರದ ಮೇಲೆ ಪೌರತ್ವ ನೀಡುವ ಕಾಯ್ದೆಯಾಗಿದೆ. ಪ್ರತಿಯೊಬ್ಬರು ಇದನ್ನು ಗೌರವಿಸಬೇಕೇ ವಿನಃ ಇದನ್ನು ವಿರೋಧ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸಿದರು.