ಬಳ್ಳಾರಿ: ಅನಾರೋಗ್ಯದಿಂದ ಸಿಐಎಸ್ಎಫ್ ಯೋಧ ಸಾವು

Public TV
0 Min Read
CISF soldier dies bellari

ಬಳ್ಳಾರಿ: ಅನಾರೋಗ್ಯದಿಂದ ಸಂಡೂರು ತಾಲೂಕಿನ ದೋಣಿಮಲೈ ಎನ್‌ಎಂಡಿಸಿ ಆಸ್ಪತ್ರೆಯಲ್ಲಿ ಸಿಐಎಸ್‌ಎಫ್‌ ಯೋಧರೊಬ್ಬರು (CISF Soldier) ಸಾವಿಗೀಡಾಗಿದ್ದಾರೆ.

ಯಲ್ಲಪ್ಪ ಬಸವರಾಜ್ ಸೂರಣಗಿ (34) ಮೃತಪಟ್ಟ ಯೋಧ. ಇವರು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ನಿವಾಸಿಯಾಗಿದ್ದರು. ಸಂಡೂರಿನ‌ ದೋಣಿಮಲೈ‌‌ನಲ್ಲಿ ಕರ್ತವ್ಯದಲ್ಲಿದ್ದರು. ಇದನ್ನೂ ಓದಿ: ಸರ್ಕಾರ ಡೆಂಗ್ಯೂ ಎಮರ್ಜೆನ್ಸಿ ಘೋಷಣೆ ಮಾಡಲಿ: ಆರ್.ಅಶೋಕ್ ಆಗ್ರಹ

ಅನಾರೋಗ್ಯ ಹಿನ್ನೆಲೆ ದೋಣಿಮಲೈನ NMDC ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಕೊನೆಯುಸಿರೆಳೆದಿದ್ದಾರೆ.

Share This Article