ಕೊಪ್ಪಳ: ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಅಯೋದ್ಯೆಯ ಶ್ರೀರಾಮ ಸರ್ಕ್ಯೂಟ್ ಅಧ್ಯಕ್ಷರಾದ ಡಾ. ರಾಮ್ ಅತ್ತುರ್ ಅವರು ಭೇಟಿ ನೀಡಿದ್ದರು.
ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದುಕೊಂಡು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ನಂತರ ಮಾತನಾಡಿ, ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಕಾಯಕಕ್ಕೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಶ್ರೀರಾಮನ ಭಕ್ತನಾಗಿರುವ ಹನುಮ ಹುಟ್ಟಿದ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದೆವು. ಅಂಜನಾದೇವಿಗೆ ಹಾಗೂ ಆಂಜನೇಯ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
Advertisement
Advertisement
ವಿಶ್ವಹಿಂದು ಪರಿಷತ್‍ನ ಅಂತರಾಷ್ಟ್ರೀಯ ಕಾರ್ಯದರ್ಶಿ ಅಲೋಕ್‍ಕುಮಾರ ಜೀ ಮಾತನಾಡಿ, ರಾಮ ಮಂದಿರ ನಿರ್ಮಾಣದಲ್ಲಿ ಯಾವುದೇ ರೀತಿಯ ವಿಳಂಭವಾಗುತ್ತಿಲ್ಲ. ಕೋರ್ಟ್ ಆದೇಶದಂತೆ ಟ್ರಸ್ಟ್ ರಚನೆಯನ್ನು ಮಾಡಿಕೊಂಡು ಮಂದಿರ ನಿರ್ಮಾಣ ಕಾರ್ಯ ಚುರುಕುಗೊಳಿಸಲಾಗುವುದು. ರಾಮ ದೇವರ ನಡೆದಾದಡಿದ ಎಲ್ಲಾ ಪ್ರದೇಶವನ್ನು ಅಭಿವೃದ್ಧಿ ಪಡೆಸಲಾಗುವುದು ಎಂದರು.
Advertisement
ಪೌರತ್ವ ಕಾಯ್ದೆಯ ತಿದ್ದುಪಡಿಯ ಕುರಿತು ದೇಶದ ಜನರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸಿ, ದೇಶದಲ್ಲಿ ಗಲಭೆಗಳು ಮಾಡಿಸಲಾಗುತ್ತಿದೆ. ಭಾರತೀಯ ಪೌರತ್ವಕ್ಕೆ ಯಾವುದೇ ದಕ್ಕೆಯಾಗುತ್ತಿಲ್ಲ. ಬೇರೆ ರಾಷ್ಟ್ರಗಳಿಂದ ಭಾರತಕ್ಕೆ ಬಂದು ನೆಲೆಸಿರುವವರಿಗೆ ಈ ಕಾನೂನು ಅನ್ವಯವಾಗುತ್ತದೆ. ಭಾರತೀಯ ಮುಸ್ಲಿಂರು ಭಾರತೀಯ ಪೌರರು, ಅವರ ಪೌರತ್ವಕ್ಕೆ ಯಾವುದೇ ರೀತಿಯ ದಕ್ಕೆಯಾಗುವುದಿಲ್ಲ. ತಪ್ಪು ಮಾಹಿತಿಗಳಿಗೆ ಭಾರತೀಯ ಪ್ರಜೆಗಳು ಕಿವಿಕೊಡಬಾರದು ಎಂದು ಹೇಳಿದ್ದಾರೆ. ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡರಾದ ಸಂತೋಷ ಕೆಲೋಜಿ ಹಾಗೂ ಇತರರಿದ್ದರು.