ಬಣ್ಣದ ಲೋಕದಲ್ಲಿ ಮಿಂಚಬೇಕಾ? ಇಲ್ಲಿದೆ ನಿಮಗೊಂದು ಸುವರ್ಣಾವಕಾಶ

Public TV
1 Min Read
Cinema School

ನ್ನಡದ ಖ್ಯಾತ ನಿರ್ಮಾಪಕ, ಚಂದನವನಕ್ಕೆ ರೋಜ್, ಮಾಸ್ ಲೀಡರ್, ವಿಕ್ಟರಿ-2ಗಳಂತಹ ಸೂಪರ್ ಸಕ್ಸಸ್ ಸಿನಿಮಾಗಳ ಕೊಟ್ಟಿರೋ ಹ್ಯಾಟ್ರಿಕ್ ಪ್ರೊಡ್ಯೂಸರ್ ತರುಣ್ ಶಿವಪ್ಪ. ತಮ್ಮದೇ ತರುಣ್ ಟಾಕೀಸ್ ಅನ್ನೋ ಒಂದು ಪ್ರೊಡಕ್ಷನ್ ಹೌಸ್ ಸ್ಥಾಪಿಸಿರೋ ಇವರು, ಇದೀಗ ಮತ್ತೊಂದು ಮಹತ್ತರ ಕಾರ್ಯಕ್ಕೆ ಮುಂದಾಗಿದ್ದಾರೆ.

ಬಣ್ಣದ ಲೋಕದಲ್ಲಿ ಮಿಂಚಬೇಕು ಅನ್ನೋ ಪ್ರತಿಭೆಗಳಿಗೆ ಅವಕಾಶವೊಂದನ್ನ ಒದಗಿಸಿದ್ದಾರೆ. ಹಾಗಂತ ತರುಣ್ ಸಿನಿಮಾದಲ್ಲಿ ನಟಿಸೋ ಚಾನ್ಸ್ ಕೊಡ್ತಿಲ್ಲ. ಬದಲಾಗಿ ನಟನೆ, ನಿರ್ದೇಶನ, ಛಾಯಾಗ್ರಾಹಣ, ಸಂಗೀತ, ಸಂಕಲನ ಹಾಗೂ ನಿರೂಪಣೆಯಲ್ಲಿ ಆಸಕ್ತಿ ಇರೋ ಪ್ರತಿಭೆಗಳಿಗೆ ತರಬೇತಿ ನೀಡೋದಿಕ್ಕೆ ‘ಸಿನಿಮಾ ಸ್ಕೂಲ್’ ಅನ್ನೋ ತರಬೇತಿ ಸಂಸ್ಥೆ ಆರಂಭಿಸಿದ್ದಾರೆ. ಇವರ ಈ ಕಾರ್ಯಕ್ಕೆ ನಿರ್ದೇಶಕ ವಿಶಾಲ್ ರಾಜ್ ಕೂಡ ಕೈ ಜೋಡಿಸಿದ್ದಾರೆ.

Cinema School A

ಸದಾ ಹೊಸತನಕ್ಕೆ ತುಡಿಯೋ ನಿರ್ಮಾಪಕ ತರುಣ್ ಶಿವಪ್ಪ ‘ಸಿನಿಮಾ ಸ್ಕೂಲ್’ ಮುಂದಿನ ತಿಂಗಳ 15 ರಿಂದ ಶುರುವಾಗ್ತಿದ್ದು, ಸಿನಿಮಾಸಕ್ತರು ಸಂಪರ್ಕಿಸಬಹುದು. ಅಷ್ಟಕ್ಕೂ ‘ಸಿನಿಮಾ ಸ್ಕೂಲ್’ ತರಬೇತಿ ಸಂಸ್ಥೆ ನಾಗರಬಾವಿ ನಮ್ಮೂರ ತಿಂಡಿ ಹಿಂಭಾಗದಲ್ಲಿರುವ ಸವೆನ್ ವಂಡರ್ಸ್ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸಲಿದೆ.

Cinema School B

ಅಂದಹಾಗೇ ‘ಸಿನಿಮಾ ಸ್ಕೂಲ್’ ಚಿತ್ರರಂಗದ ಪ್ರತಿಯೊಂದು ವಿಭಾಗದ ಕೆಲಸ ಕಾರ್ಯಗಳನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ. ಆದರೆ ಅದಕ್ಕೂ ಮುಂಚೆ ಯಾವ ವಿದ್ಯಾರ್ಥಿಗಳು ಯಾವ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎನ್ನುವುದನ್ನು ಆಯಾ ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಿ ಸೂಚಿಸಲಾಗುತ್ತದೆ. ಇಲ್ಲಿ ಒಟ್ಟು ಮೂರು ಮತ್ತು ಆರು ತಿಂಗಳ ಕೋರ್ಸ್ ಗಳು ಇರುತ್ತದೆ. ಕೋರ್ಸು ಮುಗಿಸಿದ ಎರಡು ಮೂರು ಬ್ಯಾಚ್ ಗಳ ಅಭ್ಯರ್ಥಿಗಳಲ್ಲಿ ಯಾರು ಉತ್ತಮವಾಗಿ ಕಲಿತಿರುತ್ತಾರೋ ಅವರಿಗಾಗಿಯೇ ತರುಣ್ ಟ್ಯಾಕೀಸ್ ಅಡಿಯಲ್ಲಿ ಹೊಸ ಚಿತ್ರಗಳನ್ನು ಆರಂಭಿಸಿ, ಆದ್ಯತೆ ಮೇರೆಗೆ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ.

Tarun Shivappa 1

ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಸೇರಿದಂತೆ ರಾಜ್ಯದ ಹಲವಾರು ಸಿನಿಮಾ ಶಾಲೆಗಳಲ್ಲಿ ಕಳೆದ 25 ವರ್ಷಗಳಿಂದ ತರಬೇತುದಾರರಾಗಿ ಕಾರ್ಯ ನಿರ್ವಹಿಸಿರುವ ನಿರ್ದೇಶಕ ವಿಶಾಲ್ ರಾಜ್ ಅವರು ಈ ‘ಸಿನಿಮಾ ಸ್ಕೂಲ್’ಗೆ ಪ್ರಾಂಶುಪಾಲರಾಗಿದ್ದಾರೆ. ಇವರು ಈಗಾಗಲೇ ‘ಶಿವಾನಿ’, ‘ಮಿಂಚು’, ‘ಇಂಗಳೆ ಮಾರ್ಗ’, ‘ಸಾವಿತ್ರಿ ಬಾಯಿ ಫುಲೆ’ ಸೇರಿದಂತೆ ಹಲವಾರು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *