ವರನಟ ಡಾ.ರಾಜ್ ಕುಮಾರ್ ಹುಟ್ಟಿದ ಊರಿನಲ್ಲಿ ಕೆಲ ಸಿನಿಮಾಗಳ ಚಿತ್ರೀಕರಣ ನಡೆದಿವೆ. ಆದರೆ, ಇದೇ ಮೊದಲ ಬಾರಿಗೆ ಸಿನಿಮಾದ ಮುಹೂರ್ತವೊಂದು ನಡೆಯುತ್ತಿದೆ. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ : ಸಿನಿಮಾ ರಂಗಕ್ಕೆ ಬಾ ಅನ್ನಲಿಲ್ಲ ಬಂದ, ರಾಜಕಾರಣಕ್ಕೆ ಅವನನ್ನೇ ಕೇಳಬೇಕು : ಪುತ್ರನ ಬಗ್ಗೆ ಸುಮಲತಾ ಮಾತು
ಈ ಕುರಿತು ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, “ಗಾಜನೂರಿನಲ್ಲಿ ಖಡಕ್ ಹಳ್ಳಿ ಹುಡುಗರು ಚಿತ್ರಕ್ಕೆ ಮೂಹೂರ್ತ ನಡೆಯುತ್ತಿದೆ. ಹಾಗಾಗಿ ಇಲ್ಲಿವೆ ಬಂದಿದ್ದೇವೆ. ಗಾಜನೂರಿನಲ್ಲಿ ಸಂಪತ್ತಿಗೆ ಸವಾಲ್, ಶ್ರೀನಿವಾಸ ಕಲ್ಯಾಣ ಚಿತ್ರಗಳ ಚಿತ್ರೀಕರಣ ಮಾತ್ರ ಆಗಿದೆ. ಆದ್ರೆ ಯಾವುದೇ ಚಿತ್ರದ ಮೂಹೂರ್ತ ಆಗಿಲ್ಲ ಹೀಗಾಗಿ ಪ್ರಥಮಬಾರಿಗೆ ಗಾಜನೂರಿನಲ್ಲೇ ಮೂಹೂರ್ತ ನಮ್ಮ ಸೋದರತ್ತೆ ನಾಗಮ್ಮ ಕೈಲಿ ಪೂಜೆ ಮಾಡಿಸುತ್ತೇವೆ” ಎಂದರು. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ
ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಡಾ.ರಾಜ್ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯಲಿದೆ. ಅಲ್ಲದೇ, ಕನ್ನಡಕ್ಕೆ ಮೊದಲ ಗೌರವ ಎಂಬ ಹಾಡಿನ ಚಿತ್ರೀಕರಣ ಕೂಡ ಇಲ್ಲೇ ನಡೆಯಲಿದೆಯಂತೆ. ಇದನ್ನೂ ಓದಿ : ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’
“ನಾಗತ್ತೆ ಅವರು ನಮಗೆ ಹಾಲು ಕುಡಿಸಿ ಬೆಳೆಸಿದ್ದಾರೆ. ನಮ್ಮ ತಂದೆ ಚಿತ್ರೀಕರಣಕ್ಕೆ ಹೋದಾಗ ತಾಯಿಯೂ ಸಹ ಹೋಗುತ್ತಿದ್ರು. ಆಗ ನಾಗತ್ತೆ ನಮ್ಮನ್ನು ಸಾಕಿ ಸಲುಹಿದ್ರು. ಅವರಿಗೆ ಹುಷಾರಿಲ್ಲ ಅವರ ಆರೋಗ್ಯ ವಿಚಾರಿಸಲು ಹಾಗೂ ಚಿತ್ರೀಕರಣಕ್ಕೆ ಪೂಜೆ ಮಾಡಿಸಲು ನಾವೇ ಇಲ್ಲಿಗೆ ಬಂದಿದ್ದೇವೆ” ಎಂದು ನಾಗತ್ತೆಯ ಕುರಿತಾಗಿಯೂ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿದರು. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್
ಡಾ.ರಾಜ್ ಹುಟ್ಟಿದ ಗಾಜನೂರಿಗೆ ಒಂದು ಮಹತ್ವ ಇದೆ. ಇಲ್ಲಿ ಚಿತ್ರದ ಮೂಹೂರ್ತ ನಡೆಸಿದ್ರೆ ನಮ್ಮ ಪೂರ್ವಿಕರೆಲ್ಲಾ ಬಂದು ಆಶಿರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎನ್ನುವುದು ಅವರ ಮಾತು.