ಬೆಂಗಳೂರು: ಶಾಲಾ-ಕಾಲೇಜು ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಲ್‍ಬೋರೋ ಸಿಗರೇಟ್ ಮಾರಾಟ ಮಾಡುತ್ತಿದ್ದು, ವಿದ್ಯಾರ್ಥಿಗಳು ಒಂದು ಪ್ಯಾಕ್ ಕೊಂಡರೆ 6 ಸಿಗರೇಟ್ ಫ್ರೀ ಕೊಡುತ್ತಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಸದ್ಯ ಮಾರಾಟಗಾರರ ಮೇಲೆ ಪೊಲೀಸರ ಕಣ್ಣು ಬಿದ್ದಿದೆ.
ಧೂಮಪಾನ ಸೇವಿಸಿದರೆ ಸಾವು ಸಂಭವಿಸುತ್ತದೆ. ಧೂಮಪಾನ ಮಾಡುವವರು ಎಚ್ಚರಿಕೆಯಿಂದ ಇರಿ. ಇದೆಲ್ಲ ಸಿಗರೇಟ್ ಮೇಲಿನ ಎಚ್ಚರಿಕೆ ಗಂಟೆಗಳು. ಆದರೆ ವಿದೇಶಿ ಕಂಪನಿ ಮಾಲ್‍ಬೋರೋ ಸಿಗರೇಟ್ ಕಂಪನಿಗೆ ಇದು ಯಾವುದೂ ಅನ್ವಯ ಆಗೋಲ್ಲ ಎನಿಸುತ್ತದೆ. ಈ ಎಲ್ಲ ನಿಯಮ ಗಾಳಿಗೆ ತೂರಿ ಶಾಲಾ-ಕಾಲೇಜು ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಲ್‍ಬೋರೋ ಸಿಗರೇಟ್ ಮಾರಾಟ ಮಾಡುತ್ತಿದ್ದವರ ಮೇಲೆ ಖಾಕಿ ಕೆಂಗಣ್ಣು ಬೀರಿದೆ.
Advertisement
Advertisement
ಕಳೆದ ಒಂದು ವಾರದ ಹಿಂದೆ ಏಕಕಾಲದಲ್ಲಿ ಸೆಂಟ್ರಲ್, ದಕ್ಷಿಣ ಮತ್ತು ಆಗ್ನೇಯ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸಿಕ್ಕ ಲಕ್ಷಾಂತರ ರೂ. ಮೌಲ್ಯದ ಸಿಗರೇಟು ಸೀಜ್ ಮಾಡಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಸ್ಥಳೀಯ ಪೊಲೀಸರು ಕೂಡ ಎಫ್‍ಐಆರ್ ದಾಖಲು ಮಾಡಿದ್ದು, 25ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
Advertisement
ಸದ್ಯ ಬಂಧನದ ಬಳಿಕ ಹೆಚ್ಚು ಕಮೀಷನ್ ಕೊಟ್ಟು ಈ ಸಿಗರೇಟ್ ಮಾರಾಟ ಮಾಡಿಸುತ್ತಿದ್ದಾರೆ ಎನ್ನುವ ಅಂಶ ಬಯಲಾಗಿದೆ. ಅಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಈ ಸಿಗರೇಟ್ ಸ್ಯಾಂಪಲ್ ಕೊಡುತ್ತಿದ್ದಾರೆ. ಒಂದು ಪ್ಯಾಕ್ ಸಿಗರೇಟಿಗೆ 6 ಸಿಗರೇಟು ಫ್ರೀ ಕೊಡುತ್ತಾರೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸಿಗರೇಟು ಕಂಪನಿ ವಿರುದ್ಧ ದೊಡ್ಡ ಆರೋಪ ಕೇಳಿ ಬಂದಿದ್ದು ಈಗ ಸಂಕಷ್ಟ ಎದುರಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv