ಲಕ್ನೋ: ಕಾನ್ಪುರದ ನರ್ವಾಲ್ ಪ್ರದೇಶದ ಜಮೀನಿನಲ್ಲಿ 10 ವರ್ಷದ ಬಾಲಕನ ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ದೇಹವನ್ನು ಕಾನ್ಪುರ ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಕಾನ್ಪುರ ನರ್ವಾಲ್ ಜಿಲ್ಲೆಯ ಬೆಹ್ತಾ ಗ್ರಾಮದ ನಿವಾಸಿಯಾಗಿರುವ ಬಾಲಕ ಸೋಮವಾರದಿಂದ ನಾಪತ್ತೆಯಾಗಿದ್ದನು. ಅದಕ್ಕೆ ಪೋಷಕರು ಬಾಲಕನನ್ನು ಪತ್ತೆ ಮಾಡಿ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣದ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಬಾಲಕನ ದೇಹ ಸಿಕ್ಕಿದ್ದು, ಚಿತ್ರಹಿಂಸೆ ಕೊಟ್ಟು ಸಾಯಿಸಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಬೆಳಗಾವಿಯ ಮೂವರು ಯುವತಿಯರು ನಾಪತ್ತೆ!
Advertisement
Advertisement
ಘಟನೆ ವಿವರ:
ಪೊಲೀಸರು ಬಾಲಕ ಶವವನ್ನು ಪತ್ತೆ ಮಾಡಿದಾಗ ಆತನ ಶವವೂ ವಿರೂಪಗೊಂಡ ಸ್ಥಿತಿಯಲ್ಲಿ ಸಿಕ್ಕಿದೆ. ಪರಿಣಾಮ ಪೊಲೀಸರು ಬಾಲಕನ ಶವದ ಬಗ್ಗೆ ವಿವರಿಸಿದ್ದು, ಬಾಲಕನ ಕಣ್ಣಿಗೆ ಮೊಳೆ ಹೊಡೆದಂತೆ ತೋರುತ್ತಿದ್ದು, ಆತನ ಮುಖವನ್ನು ಸಿಗರೇಟ್‍ನಿಂದ ಸುಡಲಾಗಿದೆ ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ. ದೇಹದ ಕುತ್ತಿಗೆ ಮೇಲೆ ಆಗಿರುವ ಕಲೆಗಳನ್ನು ನೋಡಿದರೆ ಬಾಲಕನನ್ನು ಕೊಲೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತೆ. ಅಲ್ಲದೆ ಬಾಲಕನನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ. ಪ್ರಸ್ತುತ ಬಾಲಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ಮರಣೋತ್ತರ ಪರೀಕ್ಷೆ ವರದಿಯಿಂದ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಸಿಒ ಸದರ್ ರಿಷಿಕೇಶ್ ಯಾದವ್ ಹೇಳಿದ್ದಾರೆ. ಪ್ರಸ್ತುತ ಕೆಲವು ಶಂಕಿತರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕಾನ್ಪುರ ಹೊರಾಂಗಣ ಎಸ್‍ಪಿ ಅಜಿತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!