ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪರೀಕ್ಷೆ ಅಕ್ರಮವನ್ನು ಸಿಐಡಿ (CID) ತನಿಖೆಗೆ ನೀಡುವುದಾಗಿ ಗೃಹ ಸಚಿವ ಪರಮೇಶ್ವರ್ (Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಆರ್‌ಡಿ ಪಾಟೀಲ್ (RD Patel) ಬಂಧನವಾಗಿದೆ. ಇವತ್ತಲ್ಲ, ನಾಳೆ ಹಿಡಿಯುತ್ತೇವೆ ಎಂದು ಹೇಳುತ್ತಿದ್ದೆ. ಕೆಲಸದಲ್ಲಿ ಎರಡು ಮೂರು ಟೀಮ್ ಮಾಡಿ ಇಲಾಖೆಯವರು ಹಿಡಿದಿದ್ದಾರೆ ಎಂದರು.
Advertisement
ಬಹಳ ಬೇಹ ಆರೋಪಿಯನ್ನು ಬಂಧಿಸಿದ್ದಕ್ಕೆ ಇಲಾಖೆಗೆ ಅಭಿನಂದನೆಗಳು. ಆರ್‌ಡಿ ಪಾಟೀಲ್ ಮೇಲೆ 5-6 ಕೇಸ್‌ಗಳಿವೆ. ಪಿಎಸ್‌ಐ (PSI) ಸೇರಿದಂತೆ ಎಲ್ಲಾ ಪ್ರಕರಣಗಳನ್ನು ಸಿಐಡಿಗೆ ನೀಡಬೇಕೆಂದು ನಾವು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
Advertisement
ಪಿಎಸ್ಐ ಮರುಪರೀಕ್ಷೆಗೆ ಕೋರ್ಟ್ ಸೂಚನೆ ನೀಡಿದೆ. ಸಂಪೂರ್ಣ ಆದೇಶವನ್ನು ನಾನು ನೋಡಿಲ್ಲ. ಅಡ್ವೊಕೇಟ್ ಜನರಲ್ ಜೊತೆ ಫೋನಿನಲ್ಲಿ ಮಾತಾಡಿದ್ದೇನೆ. ಬೇಗ ಪರೀಕ್ಷೆ ಮಾಡಿ, ಸ್ವತಂತ್ರ ಸಂಸ್ಥೆಯಿಂದ ಮಾಡಿ ಎಂದು ಹೇಳಿದೆ. ಮುಂದಿನ ಸೋಮವಾರ , ಮಂಗಳವಾರ ಆದೇಶ ಕೈ ಸೇರಿದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ವಿಜಯೇಂದ್ರ ಆಯ್ಕೆಗೆ ತಕ್ಕ ರಣನೀತಿ: ಪರಮೇಶ್ವರ್
Advertisement
Advertisement
ಈ ನಡುವೆ ಅಭ್ಯರ್ಥಿಗಳು ನಮಗೆ ಓದಲು ಸಮಯ ಕೊಡಿ ಎಂದು ಕೇಳುತ್ತಿದ್ದಾರೆ. ನೇಮಕಾತಿ ಬಳಿಕ ಅವರಿಗೆ ತರಬೇತಿ ನೀಡಲು ಒಂದು ವರ್ಷ ಆಗಲಿದೆ. ಆದ್ದರಿಂದ ನಾವು ರೂಲ್ 32 ನಲ್ಲಿ 500-600 ಎಎಸ್‌ಐಗಳನ್ನು ಪ್ರಮೋಟ್ ಮಾಡುತ್ತಿದ್ದೇವೆ. ಈ 545 ಹುದ್ದೆಗಳ ಜೊತೆಗೆ ಇನ್ನೂ 400 ಪೋಸ್ಟ್ ಖಾಲಿಯಿದೆ. ಹೀಗಾಗಿ ಒಂದೇ ಬಾರಿ ಮಾಡಬೇಕಾ ಪ್ರತ್ಯೇಕ ಪರೀಕ್ಷೆ ಮಾಡಬೇಕಾ ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.