ರಾಯಚೂರು: ನಗರದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣ ಸಂಬಂಧ ಸಿಐಡಿ ತನಿಖೆ ಚುರುಕಾಗಿ ನಡೆಯುತ್ತಿದೆ.
ಆರೋಪಿ ಸುದರ್ಶನ್ ಯಾದವ್ ನನ್ನು ಘಟನೆಗೆ ಸಂಬಂಧಪಟ್ಟ ಸ್ಥಳಗಳಿಗೆ ಕರೆದೊಯ್ದು ಅಧಿಕಾರಿಗಳು ಪರಿಶೀಲನೆ ನಡೆಸಿದರು. ನಗರದ ತಿಮ್ಮಾಪುರಪೇಟೆಯಲ್ಲಿ ಇರುವ ಆರೋಪಿ ಸುದರ್ಶನ್ ಮನೆಯಲ್ಲಿ ಪರಿಶೀಲನೆ ನಡೆಸಿದ ಸಿಐಡಿ ಎಸ್‍ಪಿ ಶರಣಪ್ಪ ನೇತೃತ್ವದ ತಂಡ, ಕೆಲ ಮಹತ್ವದ ದಾಖಲೆಗಳು ಹಾಗೂ ಆರೋಪಿಯ ಬೈಕನ್ನು ಜಪ್ತಿ ಮಾಡಿದ್ದಾರೆ.
ಮೃತ ವಿದ್ಯಾರ್ಥಿನಿಯ ಮನೆಯ ಸುತ್ತಲೂ ಆರೋಪಿಯ ಚಲನವಲನದ ಬಗ್ಗೆ ಪರಿಶೀಲನೆ ನಡೆಸಿದರು. ವಿದ್ಯಾರ್ಥಿನಿ ನಾಪತ್ತೆಯಾದ ದಿನ ಆರೋಪಿ ಸುದರ್ಶನ್ ಯಾದವ್ ಮೃತಳ ಮನೆ ಸುತ್ತಮುತ್ತ ಓಡಾಡಿದ್ದನು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಶವ ಪತ್ತೆಯಾಗಿದ್ದ ಸ್ಥಳಕ್ಕೂ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಎರಡು ದಿನಗಳ ಕಾಲ ಆರೋಪಿ ಸುದರ್ಶನ್ ಸಿಐಡಿ ಅಧಿಕಾರಿಗಳ ಕಸ್ಟಡಿಯಲ್ಲಿರಲಿದ್ದು ವಿಚಾರಣೆ ಮುಂದುವರಿದಿದೆ.