ಬೆಂಗಳೂರು: ಕೃಷಿ ಸಚಿವರ ವಿರುದ್ಧ ಪತ್ರ ಬರೆದ ಪ್ರಕರಣದಲ್ಲಿ ಬಂಧನ ಆಗಿರೋ ಇಬ್ಬರು ಅಧಿಕಾರಿಗಳು ರಾಜ್ಯದ ಜನತೆಗೆ ಸತ್ಯ ಬಹಿರಂಗ ಪಡಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದ್ದಾರೆ.
ಇಬ್ಬರು ಅಧಿಕಾರಿಗಳ ಬಂಧನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಬ್ಬರು ಅಧಿಕಾರಿಗಳನ್ನು ಯಾಕೆ ಬಂಧನ ಮಾಡಿದ್ದಾರೆ? ನಕಲಿ ಪತ್ರ ಬರೆದರು ಅಂತ ಅರೆಸ್ಟ್ ಮಾಡಿಲ್ಲ. ಪತ್ರ ಅಸಲಿಯೋ? ನಕಲಿಯೋ ಒಂದು ಭಾಗ. ಆದರೆ ಇಲ್ಲಿ ನಡೆಯುತ್ತಿರೋದು ಸತ್ಯ ಅಂತ ಗೊತ್ತಾಯ್ತಲ್ಲ? ವರ್ಗಾವಣೆ ದಂಧೆ, ಹಣದ ವ್ಯವಹಾರ ಅಸಲಿ ಅಂತ ಪ್ರೂವ್ ಆಯ್ತಲ್ಲ ಎಂದರು.
Advertisement
Advertisement
ಆ ಅಧಿಕಾರಿ ಯಾಕೆ ಪತ್ರ ಬರೆದ? ಆರೋಪಿ ಸ್ಥಾನದಲ್ಲಿ ಮಂತ್ರಿಗಳು ಇದ್ದಾರೆ. ಉತ್ತರ ಎಲ್ಲಾ ಆರೋಪಿ ಸಚಿವರೇ ಕೊಡ್ತಿದ್ದಾರೆ. ಸಿಐಡಿ ಅಧಿಕಾರಿಗಳು ತನಿಖೆ ಮಾಡಿ ವರದಿ ಗೃಹ ಸಚಿವರಿಗೆ ಕೊಡ್ತಾರಾ? ಸಿಎಂಗೆ ಕೊಡ್ತಾರಾ? ಸಿಐಡಿ ಅಧಿಕಾರಿಗಳು ಪ್ರತಿ ಮಾಹಿತಿಯನ್ನು ಆರೋಪಿತ ಸಚಿವನಿಗೆ ಕೊಡ್ತಿದ್ದಾರೆ. ಇದು ಸರ್ಕಾರನಾ? ಅಂತ ವಾಗ್ದಾಳಿ ನಡೆಸಿದರು.
Advertisement
ಇವರು ಇವರ ಮೂಗಿನ ನೇರಕ್ಕೆ ಅತಿ ವೇಗವಾಗಿ ತನಿಖೆ ಮಾಡ್ತಿದ್ದಾರೆ. ಒಂದೇ ವಾರದಲ್ಲಿ ತನಿಖೆ ಸ್ಪೀಡ್ ಆಗಿ ಮಾಡ್ತಿದ್ದಾರೆ. ಎಂತ ಮಾಹಿತಿ ಸಿಐಡಿ ಅಧಿಕಾರಿಗಳು ಕಂಡು ಹಿಡಿದಿದ್ದಾರೆ. ಆರೋಪಿ ಸ್ಥಾನದಲ್ಲಿ ಇರೋರು ಹೇಳಿಕೆ ಕೊಡ್ತಾರೆ. ಇಂತಹ ಒಂದು ತನಿಖೆ ಎಷ್ಟರ ಮಟ್ಟಿಗೆ ಸತ್ಯ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಧಿಕೃತವಾಗಿ ಪಾರ್ಟಿ ಬಿಟ್ಟು ಹೊಗ್ತೇನೆಂದು ಯಾರೂ ಹೇಳಿಲ್ಲ: ಉಮೇಶ್ ಜಾಧವ್
Advertisement
ಮೈಸೂರಿನ ಅಧಿಕಾರಿ ಮಂಡ್ಯ ಅಧಿಕಾರಿ ಹೆಸರಿನಲ್ಲಿ ಪತ್ರ ಬರೆದಿದ್ದರು. ಆ ಮೈಸೂರಿನ ಅಧಿಕಾರಿಗಳು ಯಾಕೆ ಪತ್ರ ಬರೆದರು ಅಂತ ಬಹಿರಂಗ ಮಾಡಲಿ. ಸತ್ಯಾಂಶ ಏನಿದೆ ಅಂತ ಧೈರ್ಯವಾಗಿ ಹೊರಗೆ ಹೇಳಬೇಕು. ಅಧಿಕಾರಿಗಳು ಸಂಬಳ ತೆಗೆದುಕೊಳ್ಳುವುದು ನಾಡಿನ ಆರೂವರೆ ಕೋಟಿ ಜನರ ದುಡಿಮೆ ಹಣ. ಯಾವುದೋ ಪಕ್ಷ, ಸರ್ಕಾರದ್ದು ಅಲ್ಲ. ಧೈರ್ಯವಾಗಿ ಏನು ನಡೆಯುತ್ತಿದೆ ಅಧಿಕಾರಿಗಳು ಬಹಿರಂಗ ಮಾಡಬೇಕು. ಯಾಕೆ ಪತ್ರ ಬರೆದ್ರಿ ಎಂದು ಜನರ ಮುಂದೆ ಅಧಿಕಾರಿಗಳು ಇಡಬೇಕು ಎಂದು ಆಗ್ರಹಿಸಿದರು.
ಚೆಲುವರಾಯಸ್ವಾಮಿಗೆ ನನ್ನ ಚಿಂತೆ ಮಾತ್ರ ಇದೆ. ನನ್ನ ಬಗ್ಗೆ ಚಿಂತೆ ಇರೋದಕ್ಕೆ ನನ್ನ ಹೆಸರು ಹೇಳ್ತಿದ್ದಾರೆ ಅಂತ ಚೆಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. ಇದನ್ನೂ ಓದಿ: ನಿಖಿಲ್‌ಗೆ ಬದುಕಲು ಹಲವು ಮಾರ್ಗಗಳಿವೆ; ರಾಜಕೀಯದಿಂದ ಬದುಕುವ ಅವಶ್ಯಕತೆ ಇಲ್ಲ: ಹೆಚ್‌ಡಿಕೆ
Web Stories