‘ಸಿಐಡಿ’ ಖ್ಯಾತಿಯ ನಟ ದಿನೇಶ್ ಫಡ್ನಿಸ್ ನಿಧನ

Public TV
1 Min Read
dinesh phadnis 2

ಹಿಂದಿ ಜನಪ್ರಿಯ ಧಾರಾವಾಹಿ ಸಿಐಡಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಸಿಐಡಿ (CID) ನಟ ಎಂದೇ ಖ್ಯಾತರಾಗಿದ್ದ ದಿನೇಶ್ ಫಡ್ನಿಸ್ (Dinesh Phadnis) ಅವರು ನಿಧನ (passed away) ಹೊಂದಿದ್ದಾರೆ. ಈ ಮಾಹಿತಿಯನ್ನು ಸಹ ನಟ ದಯಾನಂದ್ ಶೆಟ್ಟಿ ಅವರು ಖಚಿತ ಪಡಿಸಿದ್ದಾರೆ. ಡಿಸೆಂಬರ್ 1ರಂದು ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು.

dinesh phadnis 1

ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಸಿಐಡಿಯಲ್ಲಿ ದಯಾ ಪಾತ್ರವನ್ನು ನಿರ್ವಹಿಸುತ್ತಿದ್ದ ದಯಾನಂದ್ ಶೆಟ್ಟಿ  ಮಾಹಿತಿ ನೀಡಿದ್ದಾರೆ.

ಹಲವಾರು ಟಿವಿ ಕಾರ್ಯಕ್ರಮದಲ್ಲಿ ದಿನೇಶ್ ಭಾಗಿಯಾಗಿದ್ದರೂ, ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದರೂ, ಸಿಐಡಿ ಧಾರಾವಾಹಿ ಇವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಈ ಧಾರಾವಾಹಿಯಲ್ಲಿ ಅವರು ಫ್ರೆಡೆರಿಕ್ಸ್ (Fredericks) ಪಾತ್ರವನ್ನು ನಿರ್ವಹಿಸುತ್ತಿದ್ದರು. 20 ವರ್ಷಗಳ ಕಾಲ ಅವರು ಈ ತಂಡದೊಂದಿಗೆ ಸಕ್ರೀಯರಾಗಿದ್ದರು.

Share This Article