ನವದೆಹಲಿ: ಅಮೆರಿಕ ಸರ್ಕಾರದ ಗುಪ್ತಚರ ವಿಭಾಗ ಸಿಐಎ ವಿಶ್ವ ಹಿಂದೂ ಪರಿಷತ್(ವಿಹೆಚ್‍ಪಿ) ಮತ್ತು ಭಜರಂಗ ದಳವನ್ನು ಧಾರ್ಮಿಕ ಉಗ್ರಗಾಮಿ ಸಂಘಟನೆಗಳು ಎಂದು ಹೇಳಿದೆ.
ಗುಪ್ತಚರ ವಿಭಾಗ ತನ್ನ ಇತ್ತೀಚಿನ ವಲ್ರ್ಡ್ ಫ್ಯಾಕ್ಟ್ ಬುಕ್ ಸಂಚಿಕೆಯಲ್ಲಿ ವಿಹೆಚ್‍ಪಿ ಮತ್ತು ಭಜರಂಗ ದಳವನ್ನು ಧಾರ್ಮಿಕ ಉಗ್ರಗಾಮಿ ಸಂಘಟನೆ ಪಟ್ಟಿಗೆ ಸೇರಿಸಿದೆ. ಆರ್‍ಎಸ್ ಎಸ್ ನನ್ನು ರಾಷ್ಟ್ರೀಯತೆ ಸಂಸ್ಥೆ ಎಂದು, ಹುರಿಯತ್ ಕಾನ್ಪರೆನ್ಸ್ ಅನ್ನು ಪ್ರತ್ಯೇಕತಾವಾದಿ ಗುಂಪೆಂದು, ಜಮಾತ್ ಉಲೇಮಾ-ಇ ಹಿಂದ್ ಅನ್ನು ಧಾರ್ಮಿಕ ಸಂಸ್ಥೆ ಎಂದು ಹೇಳಿದೆ.
Advertisement
ಈ ಗುಂಪಿನ ಅಡಿಯಲ್ಲಿ ಇರುವವರು ಯಾರು ಜನಪ್ರತಿನಿಧಿಗಳಾಗಿ ಸ್ಪರ್ಧೆ ಮಾಡುವುದಿಲ್ಲ ಆದರೆ ಈ ಸಂಘಟನೆಗಳು ಸಕ್ರೀಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದೆ.
Advertisement
Advertisement
ಕೇಂದ್ರ ಗುಪ್ತಚರ ವಿಭಾಗ ತನ್ನ ವಾರ್ಷಿಕ ವಲ್ರ್ಡ್ ಫ್ಯಾಕ್ಟ್ ಬುಕ್ ನಲ್ಲಿ ಅಮೆರಿಕ ಸರ್ಕಾರಕ್ಕೆ ದೇಶಗಳ ಕುರಿತು, ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತದೆ. ದೇಶಗಳಿಗೆ ಸಂಬಂಧ ಪಟ್ಟ ಇತಿಹಾಸ, ಜನರು, ಸರ್ಕಾರ, ಆರ್ಥಿಕ ಪರಿಸ್ಥಿತಿ, ಭೂಗೋಳ, ಸಾರಿಗೆ, ಸಂವಹನ ಹಾಗೂ ಹಲವು ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. 1962 ರಿಂದ ಪ್ರಕಟವಾಗುತ್ತಿರುವ ಈ ಬುಕ್ 1975 ರಲ್ಲಿ ಸಾರ್ವಜನಿಕವಾಗಿ ಸಿಗುವಂತೆ ಮಾಡಿದೆ. ಒಟ್ಟು 267 ದೇಶಗಳ ಮಾಹಿತಿಯನ್ನು ಕೊಟ್ಟಿರುತ್ತದೆ.
Advertisement
ಸಿಐಎ ಪ್ರಕಟಣೆ ಫೇಕ್ ಸುದ್ದಿಯಾಗಿದ್ದು ಇದರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಜೆಪಿ ಸಂವಾದ ಸೆಲ್ ನ ಮಾಜಿ ರಾಷ್ಟ್ರೀಯ ಸಂಚಾಲಕ ಖೇಮ್ಚಂದ್ ಶರ್ಮಾ ಎಂದು ಹೇಳಿದ್ದಾರೆ.