ಬೆಂಗಳೂರು: ಸಿಲಿಕಾನ್ ಸಿಟಿಯ ವೀಕೆಂಡ್ ಹಾಟ್ ಫೇವರೇಟ್ ಚರ್ಚ್‍ಸ್ಟ್ರೀಟ್ ಶುಕ್ರವಾರದಿಂದ ಆರು ತಿಂಗಳ ಕಾಲ ಬಂದ್ ಆಗಲಿದೆ. ಕಾರಣ ಈ ರಸ್ತೆಯಲ್ಲಿ ಬಿಬಿಎಂಪಿ ಟೆಂಡರ್ ಶ್ಯೂರ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಿದೆ.
ವೀಕೆಂಡ್‍ನಲ್ಲಿ ಎಂ.ಜಿ ರೋಡ್, ಬ್ರಿಗೇಡ್ ರೋಡ್ ಸುತ್ತಾಡೋರು, ಊಟ ಮಾಡೋಕೆ ಹೆಜ್ಜೆ ಹಾಕೋದು ಚರ್ಚ್ ಸ್ಟ್ರೀಟ್ ರಸ್ತೆ ಕಡೆಗೆ. ಇಲ್ಲಿ ಚೈನೀಸ್, ಜಾಪ್ನೀಸ್, ಕೇರಳ ರೆಸ್ಟೋರೆಂಟ್‍ಗಳು ಸೇರಿ ಸುಮಾರು 100ಕ್ಕೂ ಹೆಚ್ಚು ರೆಸ್ಟೋರೆಂಟ್, ಪಬ್, ಬಾರ್‍ಗಳಿವೆ. ಹಲವಾರು ಕಾರ್ಪೊರೇಟ್ ಕಂಪನಿಗಳು ಈ ರಸ್ತೆಯಲ್ಲಿರೋದ್ರಿಂದ ಅಗಾಗ ಈವೆಂಟ್‍ಗಳು ನಡೀತಿರುತ್ತವೆ. ಆದ್ರೆ ರಸ್ತೆಯಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ಕೈಗೆತ್ತಿಕೊಂಡಿರೋದ್ರಿಂದ ಈ ರಸ್ತೆ ಮುಂದಿನ ಆರು ತಿಂಗಳವರೆಗೆ ಬಂದ್ ಆಗಲಿದೆ.
Advertisement
Advertisement
ಟೆಂಡರ್ ಶ್ಯೂರ್ ಕಾಮಗಾರಿ ನಡೆಸುತ್ತಿರೋದೇನೋ ಸರಿ. ಆದ್ರೆ, ರಸ್ತೆಯ ಎರಡೂ ಬದಿಗಳನ್ನು ಬಂದ್ ಮಾಡ್ತಿರೋದು ಇದೀಗ ರೆಸ್ಟೋರೆಂಟ್‍ಗಳ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ.
Advertisement
ಸಾಧ್ಯವಾದಷ್ಟು ಬೇಗ ಕಾಮಗಾರಿ ಮುಗಿಸಿಕೊಡುವ ಭರವಸೆಯನ್ನು ಬಿಬಿಎಂಪಿ ನೀಡಿದೆ. ಹಾಗಿದ್ರೂ ಮುಂದಿನ ಆರು ತಿಂಗಳ ಕಾಲ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹಲವು ಅನಾನುಕೂಲಗಳನ್ನ ಅಲ್ಲಿಗೆ ಹೋಗೋರು ಸಹಿಸಿಕೊಳ್ಳಬೇಕಾಗಿದೆ.